Friday, April 18, 2025
Google search engine

Homeರಾಜ್ಯಸುದ್ದಿಜಾಲಇಂದಿರಾಗಾಂಧಿ ಪುಣ್ಯ ಸ್ಮರಣೆ:ಭಾವಚಿತ್ರಕ್ಕೆ ಪುಷ್ಪಾರ್ಚನೆ

ಇಂದಿರಾಗಾಂಧಿ ಪುಣ್ಯ ಸ್ಮರಣೆ:ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕೆ.ಆರ್.ನಗರ: ಮಾಜಿ ಪ್ರಧಾನ ಮಂತ್ರಿ ದಿ.ಇಂದಿರಾಗಾಂಧಿರವರ ಪುಣ್ಯ ಸ್ಮರಣೆಯನ್ನು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು. ಶಾಸಕ ಡಿ.ರವಿಶಂಕರ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದು ಇಂದಿರಾಗಾಂಧಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಶಾಸಕ ಡಿ.ರವಿಶಂಕರ್ ಮಾತನಾಡಿ ಇಂದಿರಾಗಾಂಧಿ ಅವರ ಅಧಿಕಾರವಧಿಯಲ್ಲಿ ದೇಶದ ಅಭಿವೃದ್ದಿಗೆ ಮತ್ತು ಬಡ ಜನತೆಯ ಉದ್ದಾರಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಂಥಾ ಜನಪರ ಮತ್ತು ಜನಪ್ರೀಯ ಪ್ರಧಾನ ಮಂತ್ರಿಯನ್ನು ಈವರೆಗೂ ಕಾಣಲು ಸಾಧ್ಯವಾಗಿಲ್ಲ ಎಂದರು.

ಇಂದಿರಾಗಾoಧಿರವರು ಅತ್ಯಂತ ಧೈರ್ಯವಂತ ಮಹಿಳೆಯಾಗಿದ್ದು ದೇಶದ ಬಡಜನರ ಆರಾಧ್ಯ ದೈವವಾಗಿದ್ದರು ಎಂದು ಬಣಿಸಿದ ಶಾಸಕರು ಹತ್ಯೆಯಾಗಿ ೩೮ ವರ್ಷ ಕಳೆದರೂ ಜನತೆ ಅವರನ್ನು ಸ್ಮರಣೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ, ೧೧ ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಮಹಾತ್ಮಗಾಂಧೀಜಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರ ಹತ್ಯೆ ದೇಶಕ್ಕೆ ದೊಡ್ಡ ನಷ್ಟ ಈ ಮೂವರು ದೇಶಕ್ಕಾಗಿ ಹುತಾತ್ಮರಾದರೂ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೂ ಇವರುಗಳ ಬಲಿದಾನ ದೇಶದ ಮಣ್ಣಿನಲ್ಲಿ ದಾಖಲಾಗಿದೆ ಎಂದ ಶಾಸಕ ಡಿ.ರವಿಶಂಕರ್ ಇಂತಹಾ ಮಹಾತ್ಮರ ಹಾದಿಯಲ್ಲಿ ನಾವುಗಳು ಸಾಗಬೇಕು ಎಂದು ಕೋರಿದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ದ ಯುದ್ದ ನಡೆಸಿ ವಿಜಯ ಸಾಧಿಸಿದ್ದಲ್ಲದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ದೇಶವನ್ನು ಮುನ್ನಡೆಸಿದ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಬಿಜೆಪಿಯಿಂದ ಪ್ರಧಾನ ಮಂತ್ರಿಯಾಗಿದ್ದ ಅಟಲ್‌ಬಿಹಾರಿ ವಾಜಿಪೇಯಿರವರು ಇಂದಿರಾಗಾಂಧಿಯವರನ್ನು ದುರ್ಗಾದೇವತೆ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ತಾ.ಪಂ. ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಅಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್, ಟಿಎಪಿಸಿಎಂಎಸ್ ನಿರ್ದೇಶಕ ದೊಡ್ಡಕೊಪ್ಪಲುರವಿ, ಪುರಸಭೆ ಮಾಜಿ ಸದಸ್ಯರಾದ ಗುರುಶಂಕರ್, ಕೆ.ಎಲ್.ರಾಜೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕೆಂಚಿಮoಜುನಾಥ್, ಹೆಚ್.ಹೆಚ್.ನಾಗೇಂದ್ರ, ಮುಖಂಡರಾದ ಕುಳ್ಳಬೋರೇಗೌಡ, ಸುಧಾಕರ್, ಪುಟ್ಟಸ್ವಾಮಿ, ಉಮೇಶ್, ತಿಮ್ಮಶೆಟ್ಟಿ, ರಾಜಯ್ಯ, ರಾಜನಾಯಕ, ಕುಮಾರ್, ನಂಜುoಡಸ್ವಾಮಿ ಸೇರಿದಂತೆ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular