ಮೈಸೂರು: ಬೆಂಗಳೂರಿನ ಬಂಜೆತನ ನಿರ್ಮೂಲನಾ ಕೇಂದ್ರ ಗರ್ಭಗುಡಿ ವತಿಯಿಂದ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಜೂ.೧೭ರ ಬೆಳಗ್ಗೆ ೧೦ರಿಂದ ಮಧ್ಯಾಹ್ನ ಎರಡರವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಕ್ತನಿಧಿ ಕೇಂದ್ರದ ರಶ್ಮಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂತಾನೋತ್ಪತ್ತಿ ತಜ್ಷೆ ಡಾ.ಆಶಾ ಎಸ್.ವಿಜಯ್ ಅವರ ತಂಡ ಶಿಬಿರ ನಡೆಸಿಕೊಡಲಿದೆ. ಈ ವೇಳೆ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಸಲಹೆ, ತಪಾಸಣೆ, ವೀರ್ಯ ವಿಶ್ಲೇಷಣೆ ನಡೆಸಲಾಗುವುದು. ವಿವಾಹವಾಗಿ ಮಕ್ಕಳಾಗದ ೪೫ ವರ್ಷದ ವಯೋಮಿತಿ ಒಳಗಿನವರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಈಗಾಗಲೇ ಬೆಂಗಳೂರಿನಲ್ಲಿ ಗರ್ಭಗುಡಿ ಐವಿಎಫ್ ಸೆಂಟರ್ ೧೨ ವರ್ಷಗಳಿಂದ ಏಳು ಆಸ್ಪತ್ರೆಗಳ ಶಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ೮೫೦೦ಕ್ಕೂ ಹೆಚ್ಚು ದಂಪತಿಗಳು ಮಕ್ಕಳನ್ನು ಪಡೆದಿದ್ದಾರೆ. ನೋಂದಾಯಿಸಿಕೊಳ್ಳಲು ದೂ.೯೭೪೧೫ ೪೧೩೩೩ನ್ನು ಸಂಪರ್ಕಿಸಬಹು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಕ್ತನಿಧಿ ಕೇಂದ್ರದ ಡಾರ್ವಿನ್ ಹಾಜರಿದ್ದರು.