ಮೈಸೂರು: ವಿಜಯ ವಿಠಲ ವಿದ್ಯಾ ಶಾಲೆಯಲ್ಲಿ ಅಮೇಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ರವರ ಸಹಯೋಗದೊಂದಿಗೆ ಗ್ರಾಹಕರ ಹಕ್ಕುಗಳ ಜಾಗೃತಿ ವಿಷಯದಡಿಯಲ್ಲಿ ೯ನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊಫೆಸರ್.ಸುರೇಶ್ ಮಿಶ್ರಾ, ಸಾರ್ವಜನಿಕ ನಿರ್ವಾಹಕರು ಮತ್ತು ಸಂಯೋಜಕರು,,IIPA ನ್ಯೂ ಡೆಲ್ಲಿ,ಇವರು ಮಾತನಾಡುತ್ತಾ, ಮಕ್ಕಳಿಗೆ ಗ್ರಾಹಕರು ಮತ್ತು ಅವರ ಜವಾಬ್ದಾರಿ ಹಾಗೂ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಅಸಲಿ ವಸ್ತುಗಳನ್ನು ಖರೀದಿಸಲು ಹೋಗಿ ನಕಲಿ ವಸ್ತುಗಳನ್ನು ಖರೀದಿಸಿ ಬರುವವರಿಗೆ ಜಾಗ್ರತೆ ಇರಲಿ ಎಂದು ತಿಳಿಸಿದರು. ಮಕ್ಕಳ ಊಟದ ವಸ್ತುಗಳ ಮೇಲೆ, ಕುಡಿಯುವ ನೀರಿನ ಬಾಟಲಿಗಳ ಮೇಲೆ ISI ಗುರುತು ಇದೆಯೇ ಎಂಬುದನ್ನು ನೋಡಿ ಖರೀದಿಸಬೇಕು. ಯಾವುದೇ ಒಂದು ವಸ್ತುವನ್ನು ಖರೀದಿಸುವ ಮುನ್ನ ಅದರ MRP ಮುದ್ರೆ, Expire date ಅನ್ನು ನೋಡಿ ನಂತರ ಖರೀದಿಸಬೇಕು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನದ ಬಗ್ಗೆ ಮಾಹಿತಿ ಮಕ್ಕಳಿಗೆ ನೀಡಿದರು.

ನಾಗೇಂದ್ರ ಮೂರ್ತಿ, ಪ್ರೊಫೆಸರ್,ಜೆ.ಎಸ್.ಎಸ್.ಕಾನೂನು ಕಾಲೇಜು, ಮೈಸೂರು ಇವರು ಮಾತನಾಡುತ್ತಾ, ಉಚಿತಕ್ಕೆ ಸಿಗುವ ಎಲ್ಲಾ ವಸ್ತುಗಳು ಸುರಕ್ಷಿತವಲ್ಲ ,ಸೈಬರ್ ಕ್ರೈಂನಲ್ಲಿ ಮೋಸ ಹೋಗುವುದನ್ನ ತಡೆಗಟ್ಟಬೇಕು ಎಂದು ಮಕ್ಕಳಿಗೆ ತಿಳಿಸಿದರು. ಜಾಗತಿಕ ಜಾಲತಾಣಗಳಲ್ಲಿ ಲಾಗಿನ್ ಆಗುವಾಗ ವಿಶಿಷ್ಟವಾದ ಹಾಗೂ ಯಾರಿಗೂ ತಿಳಿಯದ ಇ-ಮೇಲ್ ಹಾಗೂ ಪಾಸ್ವರ್ಡ್ ಗಳನ್ನು ಇಟ್ಟುಕೊಳ್ಳಬೇಕು. ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು. ನಿಮಗೆ ಗೊತ್ತಿರುವ ಮಾರಾಟಗಾರರ ಬಳಿಯಲ್ಲಿ ವಸ್ತುಗಳನ್ನ ಖರೀದಿಸಿ. ಗುರುತು ಪರಿಚಯ ಇಲ್ಲದವರ ಫ್ರೆಂಡ್ ರಿಕ್ವೆಸ್ಟ್ ಗಳಿಗೆ ಒಪ್ಪಿಗೆ ನೀಡಬೇಡಿ ಎಂದು ತಿಳಿಸಿದರು. ಆನ್ಲೈನ್ ನಲ್ಲಿ ವಸ್ತು ಖರೀದಿಸುವ ಮುನ್ನ ಅದರ ರಿವಿವ್ಯೂಗಳನ್ನು ನೋಡಿ ಜಾಗೃತಿ ಮತ್ತು ಎಚ್ಚರಿಕೆಯಿಂದ ಖರೀದಿಸಿ ಎಂದು ಮಕ್ಕಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲ ವೀಣಾ.ಎಸ್.ಎ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
