ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ : ಸಮಾಜದಲ್ಲಿರುವ ಅಂಕು ಡೊಂಕುಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಪತ್ರಿಕಾ ರಂಗದಿಂದ ನಡೆಯುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಎಚ್.ಡಿ. ಕೋಟೆ ತಾಲ್ಲೂಕಿನ ಕಾರಾಪುರದಲ್ಲಿರುವ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದಂತೆ ಪತ್ರಿಕಾ ರಂಗವೂ ಸಹ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುತ್ತಿದೆ ಎಂದರು. ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವು ಸಹ ಪತ್ರಕರ್ತರಿಂದ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳು ಪತ್ರಕರ್ತರ ಮೂಲಕ ಬೆಳಕಿಗೆ ಬಂದಿದ್ದು, ಆ ಸಮಸ್ಯೆಗಳನ್ನು ನಾನು ಪ್ರಾಮಾಣಿಕವಾಗಿ ಬಗೆಹರಿಸಿದ್ದೇನೆ ಎಂದರು. ಸಂಘದ ನಿವೇಶನದ ವಿಚಾರವಾಗಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಸಿಎ ನಿವೇಶನವನ್ನು ಗುರುತಿಸಿ ಸಂಘಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಶಾಸಕರ ಸಹಕಾರದೊಂದಿಗೆ ಕಳೆದ ಹಲವು ವರ್ಷಗಳಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ತಾಲ್ಲೂಕಿನಲ್ಲಿ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದರು. ತಾಲ್ಲೂಕಿನಲ್ಲಿ ಪತ್ರಕರ್ತರ ಭವನದ ಅವಶ್ಯಕತೆ ಇರುವುದರಿಂದ ಶಾಸಕರು ಈ ಬಗ್ಗೆ ಗಮನಹರಿಸಿ ಭವ್ಯ ಭವನ ನಿರ್ಮಾಣಕ್ಕೆ ಅನುವು ಮಾಡುವಂತೆ ಕೋರಿದರು.
ಪ್ರತಿಭಾ ಪುರಸ್ಕಾರ
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎನ್. ನಂದಿನಿ, ಸಹನಾ, ಸಿಂಚನಾ ವಸಂತ ಮತ್ತು ಪತ್ರಕರ್ತರ ಪ್ರತಿಭಾವಂತ ಮಕ್ಕಳಾದ ನಿಸರ್ಗ ಎಸ್. ಆರಾಧ್ಯ, ಎಚ್.ಡಿ. ಭರತ್ ಹಾಗೂ ಎಸ್.ಪಿ. ಸಮರ್ಥ್ ರವರಿಗೆ ಸನ್ಮಾನಿಸಲಾಯಿತು.
ಅಲ್ಲದೇ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮಂಜುಕೋಟೆರವರಿಗೆ ಅಭಿನಂಧಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆ ವರದಿಗಾರ ರವಿಕುಮಾರ್ ಆರಾಧ್ಯರವರ ಪುತ್ರ ನಿಹಾಲ್ ಆರಾಧ್ಯರವರ ಹುಟ್ಟುಹಬ್ಬವನ್ನು ಪತ್ರಕರ್ತರ ಕುಟುಂಬಸ್ಥರು ಸೇರಿ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಡತೊರೆ ಮಹೇಶ್, ಪ್ರಧಾನ ಕಾರ್ಯದರ್ಶಿ ನಾಗರಾಮ, ಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜುಕೋಟೆ, ರಂಗರಾಜು, ಸುರೇಶ್, ರೇಣುಕಾ, ಪುರುಷೋತ್ತಮ್, ದಾಸೇಗೌಡ, ಚಂದ್ರು, ರವಿಕುಮಾರ್, ವಾಸುಕಿ ನಾಗೇಶ್, ಪುಟ್ಟರಾಜು, ಕನ್ನಡಪ್ರಮೋದ್, ಸುರೇಶ್, ನಾಗೇಶ್, ಚಿಕ್ಕಣ್ಣೇಗೌಡ, ರಂಗರಾಜು, ಆನಂದ ಪತ್ರಕರ್ತರ ಕುಟುಂಬಸ್ಥರು ಇದ್ದರು.
