ಹೊಸದಿಲ್ಲಿ: ಪ್ಯಾಕ್ ಮಾಡಲಾದ ಆಹಾರದ ಪ್ಯಾಕ್‌ನಲ್ಲಿ ಉತ್ಪನ್ನದ ಮಾಹಿತಿಯನ್ನು ಪ್ರಕಟಿಸುವಂತಹ ಆಹಾರ ಸುರಕ್ಷತೆಯ ನಿಯಮಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ 3 ತಿಂಗಳ ಗಡುವು ನೀಡಿದೆ.
ಆಹಾರದಲ್ಲಿ ಬಳಕೆಯಾದ ಅಂಶ ಗಳ ಬಗ್ಗೆ ಮಾಹಿತಿಯನ್ನು ಅದರ ಪ್ಯಾಕ್‌ನ ಮೇಲೆ ನಮೂದಿಸಬೇಕೆನ್ನುವ ಕಡ್ಡಾಯ ನಿಯಮವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿ ಮಾಡಲು ಸೂಚಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಹಾಗೂ ಕೇಂದ್ರ ಸರಕಾರ ಈ ಬಗ್ಗೆ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಆಹಾರ ಸುರಕ್ಷತೆ ಬಗ್ಗೆ ಪ್ರಾಧಿಕಾರಕ್ಕೆ 14,000 ಸಾರ್ವಜನಿಕ ಸಲಹೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚನೆಯಾಗಿದೆ. ಅದರ ನ್ವಯ ಆಹಾರ ಭದ್ರತೆ ಹಾಗೂ ಗುಣ ಮಟ್ಟ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸಮಿತಿ ಪ್ರಸ್ತಾವಿಸಿದೆ ಎಂದು ಹೇಳಿದೆ. ಇದನ್ನು ಗಮನಿಸಿದ ಪೀಠವು ಸರಕಾರಕ್ಕೆ 3 ತಿಂಗಳ ಗಡುವು ನೀಡಿದೆ.