ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿಗಳ ಮೇಲೆ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ದರ್ಪ ತೋರಿದೆ. ಶೂ ಧರಿಸದಿದ್ದಕ್ಕೆ ಗಂಟೆಗಟ್ಟಲೆ ವಿದ್ಯಾರ್ಥಿಗಳನ್ನು ಶಿಕ್ಷಕರು ಆಚೆ ನಿಲ್ಲಿಸಿದ್ದಾರೆ.
ಮಂಡ್ಯದ ಅಭಿನವ ಭಾರತಿ ವಿದ್ಯಾ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಶಾಲಾ ಅವರಣದಲ್ಲಿ ಕೈಕಟ್ಟಿ ನಿಂತಿದ್ದ 7ನೇ ತರಗತಿಯ ಮೂವರು ವಿದ್ಯಾರ್ಥಿಗಳು. ಈ ಮೂವರು ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಾಗಿದ್ದು, ರಾತ್ರಿ ಮಳೆ ಬಂದು ಮಳೆಗೆ ಶೂ ಒದ್ದೆ ಆಗಿದ್ದ ಹಿನ್ನೆಲೆ, ಶೂ ಧರಿಸದೆ ಶಾಲೆಗೆ ಬಂದಿದ್ದಕ್ಕೆ ಕೊಠಡಿಯಿಂದ ಹೊರಗಡೆ ಶಿಕ್ಷಕರು ನಿಲ್ಲಿಸಿದ್ದಾರೆ.

ಇದನ್ನು ಪ್ರಶ್ನಿಸಲು ಹೊರಟ ಮಾಧ್ಯಮದವರ ಕ್ಯಾಮರಾ ಕಂಡು ಶಿಕ್ಷಕಿ ಎಚ್ಚೆತ್ತುಕೊಂಡಿದ್ದು, ಕೂಡಲೇ ಕೊಠಡಿಯೊಳಗೆ ವಿದ್ಯಾರ್ಥಿಗಳನ್ನು ಶಿಕ್ಷಕಿ ಕರೆದುಕೊಂಡಿದ್ದು ತಡವಾಗಿ ಶಾಲೆಗೆ ಬಂದಿದ್ದಕ್ಕೆ ಕೊಠಡಿಯಿಂದ ಹೊರ ನಿಲ್ಲಿಸಿರುವುದಾಗಿ ಶಿಕ್ಷಕಿ ಹಾರಿಕೆಯ ಉತ್ತರ ನೀಡಿದ್ದಾರೆ.
ಯಾಕೆ ತಡವಾಗಿ ಶಾಲೆಗೆ ಬಂದ್ರಿ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿ ಒಳಗಡೆ ನಡೆಯಿರಿ ಎಂದು ಶಿಕ್ಷಕಿ ಹೇಳಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಶಿಕ್ಷಕಿ ತಬ್ಬಿಬ್ಬಾಗಿದ್ದು ನಮಗೇನು ಗೊತ್ತಿಲ್ಲ ನಮ್ಮ ಪ್ರಿನ್ಸಿಪಲ್ ಅವರನ್ನು ಕೇಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.