ನಂಜನಗೂಡು:ಇತ್ತೀಚೆಗೆ ಮಹದೇವನನಗರದ ವೀರಭದ್ರಬೋವಿ ಅವರು ಹುಲಿ ದಾಳಿಯಿಂದ ಗಾಯಗೊಂಡಿದ್ದ ಸ್ಥಳಕ್ಕೆ ಇಂದು ನಂಜನಗೂಡು ಕ್ಷೇತ್ರದ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಭೇಟಿ ನೀಡಿ, ಘಟನೆ ನಡೆದ ಸಂದರ್ಭದಲ್ಲಿ ಇದ್ದ ಸ್ಥಳೀಯರ ಜೊತೆ ಮಾತನಾಡಿ ಮಾಹಿತಿ ಪಡೆದು ಅವರಿಗೆ ಧೈರ್ಯ ತುಂಬಿ, ಸ್ಥಳದಲ್ಲೇ ಅರಣ್ಯ ಅಧಿಕಾರಿಗಳಿಗೆ ಬೇಗ ಹುಲಿ ಹಿಡಿಯುವುದಾಗಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕಳಲೆ ಕೇಶವಮೂರ್ತಿ ರವರು, ಮಾಜಿ ತಾ. ಪಂ ಅಧ್ಯಕ್ಷರಾದ ನಾಗೇಶ್ ರಾಜ್ ರವರು, ಕೆ. ಮಾರುತಿ ರವರು, ಉಪ್ಪಿನಹಳ್ಳಿ ಶಿವಣ್ಣ ರವರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
