ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಹಾಜರಾಗಿದ್ದುಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಸಿದ್ದರಾಮಯ್ಯ 40 ವರ್ಷದ ರಾಜಕೀಯ ಜೀವನದಲ್ಲಿ ನನ್ನದು ತೆರೆದ ಪುಸ್ತಕ ಅಂದಿದ್ದರು. ಪುಸ್ತಕ ತೆರೆದರೇ ಬರೀ ಕಪ್ಪು ಚುಕ್ಕೆ ಇದೆ. ಇಂದಿನ ಲೋಕಾಯುಕ್ತ ವಿಚಾರಣೆಯೂ ಮ್ಯಾಚ್ ಫಿಕ್ಸಿಂಗ್. ವಿಚಾರಣೆ ಎದುರಿಸಲು ಟೈಮ್ ಟೇಬಲ್ ಹಾಕಿದ್ದಾರೆ. ಬೆಳಿಗ್ಗೆ ವಿಚಾರಣೆಯಂತೆ, ಮಧ್ಯಾಹ್ನ ಪ್ರಚಾರವಂತೆ ಎಂದು ಲೇವಡಿ ಮಾಡಿದರು.