ಚಾಮರಾಜನಗರ: ಭಾರತೀಯ ಸೈನಿಕರಿಗೆ ಮತ್ತು ಸೇನಾ ವ್ಯವಸ್ಥೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಭಾರತೀಯ ಸೈನಿಕರ ಸ್ಪೂರ್ತಿ, ಧೈರ್ಯ, ಸಾಹಸ, ಹೋರಾಟ ,ಸದಾಕಾಲ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಭಾರತೀಯ ಸೇನಾ ವ್ಯವಸ್ಥೆಗೆ ಗೌರವ ನೀಡಬೇಕು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ,ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಅಮಚವಾಡಿ ಯುವಕರ ಸಂಘ, ಜೈ ಹಿಂದ್ ಪ್ರತಿಷ್ಠಾನ, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ,ಋಗ್ವೇದಿ ಯೂಥ್ ಕ್ಲಬ್ ಹಮ್ಮಿಕೊಂಡಿದ್ದ ಭಾರತೀಯ ಸೇನಾ ದಿನದಲ್ಲಿ ಮಾತನಾಡುತ್ತ ಜನವರಿ 15 ದಿನವನ್ನು ಭಾರತೀಯ ಸೇನಾ ದಿವಸವಾಗಿ ಆಚರಿಸಲಾಗುತ್ತಿದೆ. 1949ರಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆಎಮ್ ಕಾರಿಯಪ್ಪ ಅವರನ್ನು ನೇಮಕ ಮಾಡಿದ ನೆನಪಿಗಾಗಿ ಜನವರಿ 15ರಂದು ವಾರ್ಷಿಕ ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಭಾರಿ ಮೆರವಣಿಗೆಯನ್ನು ಪುಣೆ ನಗರದಲ್ಲಿ ಆಯೋಜಿಸಲಾಗುತ್ತಿದೆ.
ಭಾರತೀಯ ಸೈನಿಕರು ಯುದ್ಧ, ಕದನ ಮತ್ತು ಶತ್ರು ರಾಷ್ಟ್ರಗಳ ವಿರುದ್ಧ ಹೋರಾಟದ ಸಂದರ್ಭದಲ್ಲಿ ತಮ್ಮದೇ ಆದ ವಿಶೇಷವಾದ ತ್ಯಾಗ ,ಬಲಿದಾನವನ್ನು ಮಾಡಿ ರಾಷ್ಟ್ರ ಸದಾಕಾಲ ಹೋರಾಟದ ಬದುಕು ನಡೆಸುತ್ತಾರೆ. ಯುವಕರು ಸೇನೆಗೆ ಸೇರುವ ಬಗ್ಗೆ ತರಬೇತಿ ಪಡೆಯಬೇಕು .ರಾಷ್ಟ್ರ ಸಂರಕ್ಷಣೆಯ ಕಾರ್ಯದಲ್ಲಿ ನಾವೆಲ್ಲರೂ ಸದಾ ಕಾಲ ತೊಡಗಬೇಕು, ಮಳೆ ,ಗಾಳಿ ,ಬಿಸಿಲು, ಪ್ರವಾಹ, ಹಿಮಪಾತಗಳ ನಡುವೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭಾರತೀಯ ಸೈನಿಕರ ಸೇವೆಯನ್ನು ಮರೆಯಲಾಗದು ಎಂದು ತಿಳಿಸಿದರು.
ದೊಡ್ಡಮೋಳೆ ಯುವಕರ ಸಂಘದ ಸುರೇಶ್ ಮಾತನಾಡಿ; ಸಂಘಟನೆಗಳ ಒಕ್ಕೂಟದಿಂದ ಹಲವಾರು ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ಗ್ರಾಮಗಳಲ್ಲೂ ಸಮಾನ ಮನಸ್ಕಾರ ಸದೃಢ ಯುವ ಸಂಘಟನೆಗಳ ಬಲಪಡಿಸುವಿಕೆ ಅಗತ್ಯವಿದೆ. ಒಳ್ಳೆಯ ಕಾರ್ಯಗಳನ್ನು ಸದಾ ಕಾಲ ಮಾಡಲು ಸಂಘಟನೆಗಳು ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು. ಭಾರತೀಯ ಸೇನಾ ದಿನ ನಮಗೆಲ್ಲರಿಗೂ ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ಯುವಕರ ಸಂಘದ ಮನೋಜ್ ಯುವಕರಲ್ಲಿ ರಾಷ್ಟ್ರಭಕ್ತಿಯ ಕಾರ್ಯಗಳು, ಸಾಮಾಜಿಕ ಸೇವೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಾರ್ಗದರ್ಶನ ನೀಡುತ್ತಿರುವ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟಕ್ಕೆ ನಾವೆಲ್ಲರೂ ಸದಾಕಾಲ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಯುವಕರ ಸಂಘದ ಗಣೇಶ್, ಕಾರ್ತಿಕ್, ಸೂರ್ಯ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು