ಬೆಂಗಳೂರು: ವಿಧಾನಸೌಧ ಲೈಟಿಂಗನ್ನು ಕರ್ನಾಟಕ ಮೂಲದ ಕಂಪನಿಯೇ ಮಾಡಿದ್ದು ವಿಶೇಷವಾದ ಸಂಗತಿ. ಈ ಎಲ್ಲಾ ಲೈಟಿಂಗ್ ಸಿಸ್ಟಮನ್ನು ಕರ್ನಾಟಕದಲ್ಲೇ ಸಂಪೂರ್ಣವಾಗಿ ತಯಾರಿಸಲಾಗಿದೆ. ಲೆಕ್ಸಾ ಲೈಟಿಂಗ್, ಮೂಡಬಿದ್ರಿ ಮಂಗಳೂರು ಮೂಲದ ಪ್ರಸಿದ್ದವಾದ ವಿಶಿಷ್ಟ ದರ್ಜೆಯ ಲೈಟಿಂಗ್ ಸಿಸ್ಟಮ್ ತಯಾರಕರಾಗಿದ್ದು, ಇವರು ಪರಮನೆಂಟ್ ಲೈಟಿಂಗ್ ಸಿಸ್ಟಮನ್ನು ಪರಿಸರ ಸ್ನೇಹಿ ಎಲ್‌ಇಡಿ ತಂತ್ರಜ್ಞಾನದೊಂದಿಗೆ ಕಾರ್ಯಗತಗೊಳಿಸಿದ್ದಾರೆ.
ಈ ಲೈಟ್‌ಗಳನ್ನು ಸಿಗ್ನಲ್‌ಗಳಿಂದ ಟೈಮರ್ ಜೊತೆಗೆ ನಿಯಂತ್ರಿಸಬಹುದು ಮತ್ತು ಈ ಲೈಟ್‌ಗಳು ಲಕ್ಷಾಂತರ ಬಣ್ಣಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ವಿಧಾನ ಸೌಧದಲ್ಲಿ 1063 ಎಲ್ ಇ ಡಿ ಲೈಟಗಳನ್ನು ಅಳವಡಿಸಿದ್ದು ಕರ್ನಾಟಕದ ಹಿರಿಮೆಯ ಸೌಧವನ್ನು ಅಂಧಗಾಣಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿದೆ.
ಲೆಕ್ಸಾ ಲೈಟಿಂಗ್ ವಿಶ್ವದಾದ್ಯಾಂತ 700ಕ್ಕೂ ಹೆಚ್ಚು high end permanent ಲೈಟಿಂಗ್ projectಗಳನ್ನು ತಯಾರಿಸಿ ಸಂಪೂರ್ಣಗೊಳಿಸಿದೆ ಅದರಲ್ಲಿ ಅಯೋಧ್ಯಾ ಧಾಮ್, ಪ್ರಯಾಗರಾಜ್ ಮಹಾ ಕುಂಬ್, ಗೇಟ್‌ವೇ ಆಫ್ ಇಂಡಿಯಾ, 100ಕ್ಕೂ ಹೆಚ್ಚು ಪ್ರಸಿದ್ಧ ರೈಲ್ವೇ ನಿಲ್ದಾಣಗಳು ಅನೇಕ ಟಿವಿ ಸ್ಟುಡಿಯೋಗಳು, ಪ್ರಸಿದ್ಧ ಅಡಿಟೋರಿಯಂಗಳು ಸೇರಿವೆ.