ಗದಗ: ಎಲ್ಲಿ ನೋಡಿದರಲ್ಲಿ ಶಿವ ಲಿಂಗಗಳು, ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಅನ್ನೋ ಭಾವ ಭಕುತಿ. ಇದು ಈಗಾಗಲೇ ಲಕ್ಷಕ್ಕೂ ಹೆಚ್ಚು ಶಿವಲಿಂಗ ಇರುವ, ಒಟ್ಟು ಮೂರು ಕೋಟಿ ಶಿವಲಿಂಗ ಸ್ಥಾಪನೆಗೆ ಸಜ್ಜಾಗಿ ನಿಂತ ನೆಲ!ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಶಂಕು ಸ್ಥಾಪನೆ ನಡೆಸಲಾಗಿದೆ. ಭೂಮಿ ಶುದ್ದೀಕರಣಕ್ಕಾಗಿ ಹೋಮ ಹವನ, ವಾಸ್ತುಹೋಮ, ಗಣ ಹೋಮ, ನವಗ್ರಹ ಹೋಮಗಳನ್ನು ನಡೆಸಲಾಯಿತು. ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಶಿವಲಿಂಗಗಳಿವೆಯಂತೆ. ದಾನಿಗಳ ಸಹಕಾರದಿಂದ ಒಟ್ಟು 3 ಕೋಟಿ ಶಿವಲಿಂಗಗಳನ್ನು ಸುಮಾರು 50 ಎಕರೆ ಭೂಮಿಯಲ್ಲಿ ಸ್ಥಾಪಿಸುವ ಸಂಕಲ್ಪ ಮಾಡಲಾಗಿದೆ. ಇನ್ನೇನು ಭರದಿಂದ ಶಿವಲಿಂಗಗಳ ಸ್ಥಾಪನೆಯ ಕಾರ್ಯಗಳು ಭರದಿಂದ ಜರುಗಲಿವೆ ಎಂದು ತುಮಕೂರಿನ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಡಾ. ಕರಿವೃಷಭದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.