ಟ್ರೇಡರ್ಸ್ ಪರವಾನಿಗೆ ರದ್ದುಪಡಿಸಿ: ಕಬ್ಬು ಬೆಳೆಗಾರರ ಒತ್ತಾಯ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣ ಹಾಗೂ ತಾಲ್ಲೂಕಿನ ವಿವಿದೆಡೆ ರಸ ಗೊಬ್ಬರ ಟ್ರೇಡರ್ಸ್ ಮಾಲೀಕರು ರೈತರಿಗೆ ನಿಗದಿ ಬೆಲೆಗೆ ರಸ ಗೊಬ್ಬರ ಮಾರಾಟ ಮಾಡದೇ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದು ಜೊತೆಗೆ ರಷೀದಿ ಕೇಳಿದರೆ ಕೊಡದೆ ರೈತರಿಗೆ ಧಕ್ಮಿ ಹಾಕುತ್ತಿದ್ದಾರೆ ಇಂತಹ ಟ್ರೇಡರ್ಸ್ ನ ಪರವಾನಿಗೆ (ಲೈಸನ್ಸ್ ) ರದ್ದು ಮಾಡಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಕೆ.ಆರ್.ನಗರ ಪಟ್ಟಣದ ಸಹಾಯಕ ಕೃಷಿ ನಿರ್ಧೆಶಕರ ಕಚೇರಿಯಲ್ಲಿ ಕೃಷಿ ಅಧಿಕಾರಿ ಪ್ರಶನ್ನ ದಿವಾಣ್ ಅವರಿಗೆ ರೈತ ಮುಖಂಡರೊಂದಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು ಸರ್ಕಾರದ ನಿಗದಿಪಡಿಸಿದ ಎಂ.ಆರ್.ಪಿ ದರಕ್ಕಿಂತ ದುಪ್ಪಟ್ಟು ಹಣವನ್ನು ಟ್ರೇಡರ್ಸ್ ಮಾಲೀಕರು ಕೇಳುತ್ತಿದ್ದಾರೆ ಇದಕ್ಕೆ ಯಾರು ಹೊಣೆ, ಒಂದು ಮೂಟೆ ಯೂರಿಯಾ ರಸ ಗೊಬ್ಬರದ ಬೆಲೆ 268 ಇದ್ದು ಟ್ರೇಡರ್ಸ್ ನವರು 320 ರೂ ಕೇಳುತ್ತಾರೆ, ಏಕೆ ಎಂದು ಪ್ರಶ್ನೆ ಮಾಡಿದರೆ ಯೂರಿಯಾ ಗೊಬ್ಬರ ಇಲ್ಲ ಎಂದು ಧಮ್ಕಿ ಹಾಕುತ್ತಾರೆ ಎಂದರು.
ಇನ್ನೂ ಕೆಲ ಟ್ರೇಡರ್ಸ್ ಮಾಲೀಕರು ರಸ ಗೊಬ್ಬರ ಬೇಕಾದರೆ ತೆಗೆದುಕೋ ಇಲ್ಲವಾದರೆ ಹೋಗು ಎಂದು ರೈತರ ಮೇಲೆ ಉಡಾಫೆ ಮಾತನಾಡಿ ಅಸಭ್ಯವಾಗಿ ವರ್ತಿಸಿ ಬಾಯಿ ಬಂದ ಪದಗಳನ್ನು ಉಪಯೋಗಿಸುವುರದ ಜೊತೆಗೆ ಏಕವಚನವದಿಂದ ನಿಂದಿಸಿ ರೈತರ ಸಂಘಟನೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ. ರೈತರ ಚಿಹ್ನೆ ಹಸಿರು ಶಾಲಿನ ಬಗ್ಗೆ ಕೀಳು ಪದವನ್ನು ಉಪಯೋಗಿಸಿ ರೌಡಿಗಳಂತೆ ರೈತರ ಮೇಲೆ ದರ್ಪದಿಂದ ವರ್ತನೆ ಮಾಡುತ್ತಿದ್ದಾರೆ ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ನಿಮ್ಮ ಇಲಾಖೆ ವಿರುದ್ದ ಪ್ರತಿಭಟನೆ ಮಾಡುತ್ತೇವೆ ಎಂದರು.
ಕೆಲವು ರಸ ಗೊಬ್ಬರ ಟ್ರೇಡರ್ಸ್ ನ ಪರವಾನಿಗೆಯನ್ನು ರದ್ದು ಪಡಿಸಲು ಜಿಲ್ಲಾ ಜಂಟಿ ಕೃಷಿ ನಿರ್ಧೆಶಕರಿಗೆ ಶಿಪಾರಸ್ಸು ಮಾಡಿ ಎಂದರಲ್ಲದೆ ಟ್ರೇಡರ್ಸ್ ಮಾಲೀಕರ ಜೊತೆ ಸಭೆ ಮಾಡಿದ್ದಾದರೂ ಪ್ರಯೋಜನವಿಲ್ಲ ಆದ್ದರಿಂದ ಅಂತಹ ಟ್ರೇಡರ್ಸ್ ಮಾಲೀಕರ ವಿರುದ್ದ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದೇ ಸೂಕ್ತ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಅಧ್ಯಕ್ಷ ಕೆ.ಪಿ. ಶಿವರಾಜು, ಪ್ರ.ಕಾರ್ಯದರ್ಶಿ ತಿಪ್ಪೂರು ಲೋಕೇಶ್, ರೈತ ಮುಖಂಡರಾದ ಬಾಲೂರು ನಾಗರಾಜ್, ಬಳ್ಳೂರು ಸ್ವಾಮೀಗೌಡ ಮೊದಲಾದವರು ಇದ್ದರು.