Friday, April 18, 2025
Google search engine

Homeಸ್ಥಳೀಯವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಅಂತರ ಪ್ರೌಢಶಾಲಾ ಸ್ಪರ್ಧಾ ಕಾರ್ಯಕ್ರಮ

ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಅಂತರ ಪ್ರೌಢಶಾಲಾ ಸ್ಪರ್ಧಾ ಕಾರ್ಯಕ್ರಮ

ಸ್ಪರ್ಧಾ – 2023 ರ ‘ಪರ್ಯಾಯ ಪಾರಿತೋಷಕ’ ವನ್ನು ಪಡೆದ ಪ್ರಥಮ ವಿಜೇತ ಶಾಲೆ ‘ಕ್ರೈಸ್ಟ್ ಪಬ್ಲಿಕ್ ಸ್ಕೂಲ್’.
ಸ್ಪರ್ಧಾ – 2023 ರ ರನ್ನರ್ ಅಪ್ ಪಾರಿತೋಷಕ ಪಡೆದ ಶಾಲೆ ‘ಸದ್ವಿದ್ಯಾ ಪ್ರೌಢಶಾಲೆ,ವಿಜಯನಗರ’.

ಮೈಸೂರು:ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಇಂಟ್ರ್ಯಾಕ್ಟ್ ಕ್ಲಬ್ ವತಿಯಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಸ್ಪರ್ಧಾ – 2023 ರ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ.ರವೀಂದ್ರ ಜೋಶಿ, ಹಿರಿಯ ಪತ್ರಕರ್ತರು, ಮೈಸೂರು.ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಅವರು ಮಾತನಾಡುತ್ತಾ ಮಕ್ಕಳು ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವುದರ ನಿಟ್ಟಿನಲ್ಲಿ ವಿಜಯ ವಿಠ್ಠಲ ಶಾಲೆಯು ಪ್ರಯತ್ನವನ್ನು ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇಂದು ಮಕ್ಕಳಲ್ಲಿ ನಕಾರಾತ್ಮಕ ಧೋರಣೆ ಜಾಸ್ತಿಯಾಗಿ ನಮ್ಮಲ್ಲಿ ಪ್ರತಿಭೆ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.ಮಕ್ಕಳು ತಮ್ಮಲ್ಲಿರುವ ತೀಕ್ಷ್ಣ ಬುದ್ಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಬದುಕನ್ನು ಏಕಮೇವಗೊಳಿಸುವ ಸಮುದಾಯವೆಂದರೆ ಅದು ಶಾಲೆ.ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಂಡು ಸಮೃದ್ಧವಾದ ನಾಡನ್ನು ಕಟ್ಟುವ ಕೆಲಸ ಮಕ್ಕಳಿಂದ ಆಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯ ವಿಠ್ಠಲ ವಿದ್ಯಾಶಾಲೆಯ ಟ್ರಸ್ಟಿಗಳಲ್ಲೊಬ್ಬರಾದ ಕೆ.ಎನ್.ಪ್ರಸಾದ್ ರವರು ಮಾತನಾಡಿ, ಎಲ್ಲರೂ ಗೆಲ್ಲಲೂ ಪ್ರಯತ್ನಿಸಿ ಎಂದು ಮಕ್ಕಳಿಗೆ ಪ್ರೇರಣೆ ತುಂಬಿದರು.
ಗೌರವ ಕಾರ್ಯದರ್ಶಿಗಳಾದ ಶ್ರೀಯುತ.ವಾಸುದೇವ್ ಭಟ್ ರವರು ಮಾತನಾಡುತ್ತಾ, ಶಿಕ್ಷಣದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ.ಸ್ಪರ್ಧೆಯಲ್ಲಿ ಭಾಗವಹಿಸುವವರು ಕೊನೆಯವರೆಗೂ ಇದ್ದು ತಮ್ಮ ದೋಷಗಳನ್ನು ಇನ್ನೊಬ್ಬರನ್ನು ನೋಡಿ ತಿದ್ದಿಕೊಂಡಾಗ ಜ್ಞಾನ ವೃದ್ಧಿಯಾಗುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ವಿಜಯ ವಿಠ್ಠಲ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ.ಸತ್ಯಪ್ರಸಾದ್ , ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವೀಣಾ ಎಸ್.ಎ. ತೀರ್ಪುಗಾರರು, ಪೋಷಕರು, ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಎಲ್ಲಾ ವಿಭಾಗದ ತೀರ್ಪುಗಾರರು ಮಕ್ಕಳು ಸ್ಪರ್ಧೆಗೆ ಹೇಗೆ ತಯಾರಾಗಬೇಕು ಎಂಬ ಸಲಹೆಗಳನ್ನು ನೀಡಿದರು.
ನಂತರ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಜಯ ವಿಠ್ಠಲ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸತ್ಯಪ್ರಸಾದ್ ರವರು ಮಾತನಾಡುತ್ತಾ, ಶಾಲೆಯಿಂದ ಸ್ಫರ್ಧೆಗೆ ಪ್ರತಿನಿಧಿಸಿದ ಎಲ್ಲಾ ಮಕ್ಕಳು ಗೆದ್ದಂತೆ ಎಂದು ಮಕ್ಕಳನ್ನು ಅಭಿನಂದಿಸಿದರು.

ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಆತ್ಮವಿಶ್ವಾಸ,ವಿಷಯ ಸಂಗ್ರಹಣೆ ಬಹಳ ಮುಖ್ಯ.

ಚರ್ಚಾಸ್ಪರ್ಧೆ ಕುಲಂಕಶವಾದ ವಿಷಯ ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸಂಗೀತದಲ್ಲಿ ಅಭ್ಯಾಸ ನಿರಂತರವಾಗಿರಬೇಕು.ಯಾರೊಂದಿಗೂ ಸ್ಪರ್ಧೆಗಿಳಿಯದೆ ವೈಯಕ್ತಿಕ ಗುರಿಯಿಟ್ಟು ನಡೆದರೆ ಒಳ್ಳೆಯದು ಎಂದು ತಿಳಿಸಿದರು.
ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾಗಬೇಕು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿರಬೇಕು ಎಂದು ಮಕ್ಕಳನ್ನು ಹುರಿದುಂಬಿಸಿದರು.
ಸ್ವಯಂಸೇವಕ ವಿದ್ಯಾರ್ಥಿಗಳು,ಶಿಕ್ಷಕರ ನಿರ್ದೇಶನದಡಿಯಲ್ಲಿ, ಅವರಿಗೆ ನೀಡಿದ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ಹೊತ್ತುಕೊಂಡು ಅದ್ಭುತ ಸಹಾಯವನ್ನು ಒದಗಿಸಿದರು. ಅವರು ತಮ್ಮ ಕರ್ತವ್ಯಗಳನ್ನು ವಿಧೇಯರಾಗಿ ಮತ್ತು ಸಂತೋಷದಿಂದ ಮತ್ತು ಅತ್ಯಂತ ಜವಾಬ್ದಾರಿಗಳೊಂದಿಗೆ ಪ್ರದರ್ಶಿಸಿದರು.

RELATED ARTICLES
- Advertisment -
Google search engine

Most Popular