Thursday, November 27, 2025
Google search engine

Homeರಾಜಕೀಯಸ್ವಾಮೀಜಿಗಳು ರಾಜಕೀಯದಲ್ಲಿ ಮಧ್ಯಪ್ರವೇಶ ಸೂಕ್ತವಲ್ಲ: ಮಾಜಿ ಸಚಿವ ಕೆ.ಎನ್ ರಾಜಣ್ಣ

ಸ್ವಾಮೀಜಿಗಳು ರಾಜಕೀಯದಲ್ಲಿ ಮಧ್ಯಪ್ರವೇಶ ಸೂಕ್ತವಲ್ಲ: ಮಾಜಿ ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು:ಒಕ್ಕಲಿಗ ಮಠದ ಸ್ವಾಮೀಜಿಗಳು ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ಸ್ವಾಮೀಜಿಗಳು ಧರ್ಮ ಸುಧಾರಣೆ ಕೆಲಸ ಮಾಡಲಿ. ಅವರು ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹೈಕಮಾಂಡ್ ಕರೆದರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಹೋಗಬೇಕಾಗುತ್ತದೆ. ಹೈಕಮಾಂಡ್ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ನಡೆಯೇ ನನ್ನ ನಡೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದ ಎಂದರು.

ಅಧಿಕಾರ ಹಂಚಿಕೆ ಬಗ್ಗೆ ಆಗ ಏನೆಲ್ಲಾ ಮತುಕತೆ ಆಗಿದೆ ಯಾರೆಲ್ಲ ಮಾತನಾಡಿದ್ದಾರೆ ಗೊತ್ತಿಲ್ಲ. ನಮ್ಮ ತೀರ್ಮಾನ ಅಲ್ಲ ಹೈಕಮಾಂಡ್ ತೀರ್ಮಾನ ಅಂತಿಮ ಅಲ್ಲವಾ? ಯಾವ್ಯಾವ ಸಂದರ್ಭದಲ್ಲಿ ಏನು ನಡೆಯಬೇಕೋ ಅದು ನಡೆಯುತ್ತೆ ಕಾಂಗ್ರೆಸ್ ನಲ್ಲಿ ಮಾತ್ರ ಅಲ್ಲ ಎಲ್ಲಾ ಪಕ್ಷದಲ್ಲೂ ಅಹಿಂದ ಇದೆ ಎಂದರು.ಡಿಕೆ ಶಿವಕುಮಾರ್ ಸಹಿ ಸಂಗ್ರಹ ವಿಚಾರ ಸಂಬಂಧ, ಯಾರೂ ಸಹಿ ಸಂಗ್ರಹ ಮಾಡುತ್ತಿಲ್ಲ. ಡಿಕೆ ಶಿವಕುಮಾರ್ ಒಬ್ಬ ಪಕ್ಷದ ಅಧ್ಯಕ್ಷರಾಗಿ ಸಹಿ ಸಂಗ್ರಹ ಮಾಡಲ್ಲ ಡಿಕೆ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ನಾವು ಏನನ್ನೂ ಊಹೆ ಮಾಡಿಕೊಳ್ಳುವುದಕ್ಕೆ ಆಗಲ್ಲ ಎಂದರು.

RELATED ARTICLES
- Advertisment -
Google search engine

Most Popular