ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಜೈಹಿಂದ್ ಕಟ್ಟೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರಿಗೆ ಗೌರವ ಹಾಗೂ ಅಮ್ಮ ನಿಮಗೆ ವಂದನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಾಹ್ಮಿ ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ವತ್ಸಲಾ ರವರು ಉದ್ಘಾಟನೆ ನೆರವೇರಿಸಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ವಿಶೇಷ ಸ್ಪೂರ್ತಿ ಹಾಗೂ ಪ್ರೇರಣೆ ನೀಡುವ ದಿನವಾಗಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಋಗ್ವೇದಿ ಯೂತ್ ಕ್ಲಬ್ ಹಿರಿಯ ನಾಗರಿಕರಾದ ಶ್ರೀಮತಿ ಸರೋಜಮ್ಮ ರವರನ್ನು ಗೌರವಿಸುವುದು ಅಭಿನಂದನೀಯ.
ಸರೋಜಮರವರು ೯೦ ವರ್ಷದಲ್ಲು ಎಲ್ಲರಿಗೂ ಮಾರ್ಗದರ್ಶನದ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಪೂರ್ಣಿಮಾ ರವರು ಮಹಿಳೆ ವಿಜ್ಞಾನ ,ತಂತ್ರಜ್ಞಾನ, ಕೃಷಿ ,ಕೈಗಾರಿಕೆ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಸೈನ್ಯ, ನಾಟಕ, ಸಿನಿಮಾ, ಭಾಹ್ಯಾಕಾಶ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದರು.

ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ ಮಾತನಾಡಿ, ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಸಂಸ್ಕೃತಿ , ಪರಂಪರೆ,ರಾಷ್ಟ್ರೀಯ ಚಿಂತನೆಯ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ವಾಂಸರಾದ ಗಾರ್ಗಿ ,ಮೈತ್ರಿ ಹೋರಾಟಗಾರರಾದ ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಾಣಿ ಚೆನ್ನಮ್ಮ, ಒನಕೆ ಒಬ್ಬವ ಡಾ.ಲಕ್ಷ್ಮೀಸೆಹಗಲ್, ಕಲ್ಪನಾ ದತ್ತ, ಸಾವಿರಾರು ಮಹಿಳೆಯರು ಸಮಾಜಕ್ಕೆ ತಮ್ಮದೇ ಆದ ತ್ಯಾಗ ಬಲಿದಾನ ಹಾಗೂ ಕೊಡುಗೆ ನೀಡಿದ್ದಾರೆ .ದೇಶದ ಮಹಿಳೆಯರಿಗೆ ಬಹಳ ಗೌರವವಿದೆ. ಮಹಿಳೆ ಮಾತೃಸ್ಥಾನದಲ್ಲಿ ಸರ್ವರನ್ನು ಪ್ರೀತಿ ಕರುಣೆ, ವಿಶ್ವಾಸ ,ಮಮತೆಯಿಂದ ನೋಡಿಕೊಂಡು ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಮಹಿಳೆಯಾಗಿರುವುದು ಭಾರತ ಮಹಿಳೆಯರಿಗೆ ನೀಡಿರುವ ಗೌರವವನ್ನು ತೋರಿಸುತ್ತದೆ ಎಂದರು.
ನಿವೃತ್ತಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಮಹಿಳೆಯರ ಶಕ್ತಿ ಅಪಾರ. ಕುಟುಂಬದ ಮೂಲಕ ಸಮಾಜದ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿರುವ ಮೂಲಕ ವಿಶ್ವವನ್ನೇ ಬೆರಗು ಗೊಳಿಸುವ ಸಾಧಕರಗಿರುವುದನ್ನು ನೋಡಿದ್ದೇವೆ ಎಂದರು.
ಹಿರಿಯ ನಾಗರಿಕರಾದ ಸರೋಜಮ್ಮ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಾಹ್ಮಿ ಮಹಿಳಾ ಸಂಘದವಿಜಯಲಕ್ಷ್ಮಿ, ಜೈಹಿಂದ್ ಪ್ರತಿಷ್ಠಾನದ ವಾಣಿಶ್ರೀ, ಶ್ರಾವ್ಯ, ಸುರೇಶ್ ಎನ್ ಋಗ್ವೇದಿ, ನಾಗಾಸುಂದರ್ ಇದ್ದರು.