Monday, April 7, 2025
Google search engine

Homeರಾಜ್ಯಚೀನಾ ಭಾರತದ 176 ಕಿ.ಮೀ ಅತಿಕ್ರಮ ಪ್ರವೇಶಿಸಿದನ್ನು ಮುಚ್ಚಿ ಹಾಕಲು ‘ವಕ್ಫ್’ ಬಿಲ್ ಮಂಡನೆ ನಾಟಕ...

ಚೀನಾ ಭಾರತದ 176 ಕಿ.ಮೀ ಅತಿಕ್ರಮ ಪ್ರವೇಶಿಸಿದನ್ನು ಮುಚ್ಚಿ ಹಾಕಲು ‘ವಕ್ಫ್’ ಬಿಲ್ ಮಂಡನೆ ನಾಟಕ : ಸಂತೋಷ್ ಲಾಡ್

ಧಾರವಾಡ : ಇತ್ತೀಚಿಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಕ್ಫ್ ಮಸೂದೆ-2025 ಬಿಲ್ ಮಂಡನೆ ಮಾಡಲಾಯಿತು. ಇದೇ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ ಲಾರ್ಡ್ ಚೀನಾ ಭಾರತದ 176 ಕಿಲೋಮೀಟರ್ ಪ್ರದೇಶವನ್ನು ಅತಿಕ್ರಮಣ ಮಾಡಿದೆ ಇದಕ್ಕಾಗಿ ವಕ್ಫ್ ಬಿಲ್ ಮಂಡನೆ ಮಾಡಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೀನಾ ನಮ್ಮ ದೇಶದೊಳಗೆ 175 ಕಿಲೋ ಮೀಟರ್ ಅತಿಕ್ರಮ ಪ್ರವೇಶ ಮಾಡಿದೆ. ಅದನ್ನು ಮುಚ್ಚಿ ಹಾಕಲು ವಕ್ಫ್ ವಿಚಾರ ಮುಂದೆ ತಂದಿದ್ದಾರೆ. ಚೀನಾ 600ಕ್ಕೂ ಹೆಚ್ಚು ಹಳ್ಳಿಗಳನ್ನು ಕಬ್ಜಾ ಮಾಡಿದೆ ಎಂದು ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರವಾಗಿ ಆರೋಪಿಸಿದರು.

ಚೀನಾದವರು ಎರಡು ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ. ಇದು ಎಲ್ಲೂ ಬರಬಾರದೆಂದು ವಕ್ಫ್ ಬಿಲ್ ತಂದಿದ್ದಾರೆ. ಬಡತನ, ನಿರುದ್ಯೋಗದ ಬಗ್ಗೆ ಚರ್ಚೆ ಆಗಬಾರದೆಂಬ ಉದ್ದೇಶದಿಂದ ಬಿಜೆಪಿಯವರು ಇಂತಹ ನಾಟಕ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಅವರದ್ದೇ ಆದಂತಹ ಒಂದು ವ್ಯವಸ್ಥೆ ಇದೆ. ಅವರಿಗೆ ಆದ ಕಾಯ್ದೆ ಕಾನೂನು ಇವೆ. ಇದು ಆರ್ಟಿಕಲ್ 26 ರಲ್ಲಿ ಇದೆ ಆದರೂ ಅದನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು.

RELATED ARTICLES
- Advertisment -
Google search engine

Most Popular