Friday, April 18, 2025
Google search engine

Homeಅಪರಾಧಫೇಸ್‌ಬುಕ್​ನಲ್ಲಿ ಯುವತಿ ಪರಿಚಯ: 60 ವರ್ಷದ ಅರ್ಚಕನಿಗೆ ಲಕ್ಷ-ಲಕ್ಷ ಪಂಗನಾಮ

ಫೇಸ್‌ಬುಕ್​ನಲ್ಲಿ ಯುವತಿ ಪರಿಚಯ: 60 ವರ್ಷದ ಅರ್ಚಕನಿಗೆ ಲಕ್ಷ-ಲಕ್ಷ ಪಂಗನಾಮ

ಮಂಡ್ಯ: ಫೇಸ್‌ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿ, ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾಳೆ. ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡಿದ್ದು, ಇದೀಗ ಪೂಜಾರಪ್ಪ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್, ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ವಿಜಯ್ ಕುಮಾರ್ ಚಾಟಿಂಗ್ ಮಾಡುತ್ತಿದ್ದರು.ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿದ್ದಾಳೆ.

ಬಣ್ಣ ಬಣ್ಣದ ಮಾತುಗಳಿಂದ ವಿಜಯ್ ಕುಮಾರ್‌ಗೆ ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ‌ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಡ ಹೇರಲಾರಂಭಿಸಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್‌ಬುಕ್‌ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ. ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್‌ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

RELATED ARTICLES
- Advertisment -
Google search engine

Most Popular