ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ಅಸಹಜ ಸಾವುಗಳ ವರದಿ ಬಹಳ ಬರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಇದೆ.ಹೊರನೋಟಕ್ಕೆ ಇದು ಸಾಮಾನ್ಯ ಸಾವು ಎಂದು ಕಂಡರು ಸಾರ್ವಜನಿಕ ವಲಯದಲ್ಲಿ ಅನೇಕ ಸಂಶಯಗಳು ಇರುವಂತೆ ಕಾಣುತ್ತದೆ ಚರ್ಚೆಗೆ ಗ್ರಾಸವಾಗಿದೆ.
ವಯೋವೃದ್ಧರು, ಮಹಿಳೆಯರು, ಒಂಟಿಯಾಗಿ ವಾಸ ಮಾಡುವವರು ಹೆಚ್ಚಿನವರು ಜಿಲ್ಲೆಯಲ್ಲಿ ಇದ್ದಾರೆ. ಗುಡ್ಡ ಕಾಡು ಪ್ರದೇಶ ಆದ್ದರಿಂದ ಜನರಲ್ಲಿ ಅಸಹಜ ಸಾವುಗಳ ವಿಷಯ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಇವುಗಳ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರನ್ನು ಸೂಕ್ತ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ. ಕೊಡಗಿನ ಶಾಸಕದ್ವಯರು ಮುಂದಿನ ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸುತ್ತದೆ.



