ಚಾಮರಾಜನಗರ: ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಉಮ್ಮತ್ತೂರಿನಲ್ಲಿ ಕರಕುಶಲ ಉದ್ಯಮ ನಡೆಸುತ್ತಿರುವ ವರ್ಷಾ ಎಂಬ ಯುವತಿಗೆ ಆಹ್ವಾನಿಸಲಾಗಿದೆ. 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಸಂಜೆ 7:15 ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಪದಗ್ರಹಣಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಮಾರಂಭಕ್ಕೆ ಗಣ್ಯಾತಿ ಗಣ್ಯರಿಗೆ ಆಹ್ವಾನಿಸಲಾಗಿದೆ.
ವರ್ಷಾ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ
ಮೋದಿ ಅವರ ಮನ್ಕಿ ಬಾತ್ನಿಂದ ಪ್ರೇರಣೆಗೊಂಡು ಕರಕುಶಲ ಉದ್ಯಮ ಆರಂಭಿಸಿದ್ದರು. ಅನುಪಯುಕ್ತ ಬಾಳೆ ದಿಂಡಿನಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿರುವ ವರ್ಷಾ, ಹಲವು ಮಹಿಳೆಯರಿಗೆ ಉದ್ಯಮ ನೀಡುವ ಜೊತೆಗೆ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ವರ್ಷಾ ಸಾಧನೆಯ ಬಗ್ಗೆಯು ಮನ್ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್ ಎಂದು ಪ್ರಶಂಸಿದ್ದರು. ಇದೀಗ ವರ್ಷಾ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ನವದೆಹಲಿ ತಲುಪಿದ್ದಾರೆ.