Thursday, March 12, 2026
Google search engine

Homeವಿದೇಶಯುದ್ಧ ಅಂತ್ಯಕ್ಕೆ ಇರಾನ್ ಮೂರು ಷರತ್ತು

ಯುದ್ಧ ಅಂತ್ಯಕ್ಕೆ ಇರಾನ್ ಮೂರು ಷರತ್ತು

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಕಾಣುವ ಸಾಧ್ಯತೆಗಳು ವ್ಯಕ್ತವಾಗಿವೆ. ದಾಳಿಗಳನ್ನು ನಿಲ್ಲಿಸಲು ಮೂರು ಪ್ರಮುಖ ಷರತ್ತುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್ ಹೇಳಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಸಂಘರ್ಷದ ವೇಳೆ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು ಹಾಗೂ ಭವಿಷ್ಯದಲ್ಲಿ ದಾಳಿ ಮಾಡುವುದಿಲ್ಲ ಎಂಬ ಅಂತರರಾಷ್ಟ್ರೀಯ ಖಾತರಿ ನೀಡಬೇಕು ಎಂದು ಹೇಳಿದ್ದಾರೆ.

ರಷ್ಯಾ ಹಾಗೂ ಪಾಕಿಸ್ತಾನದ ನಾಯಕರ ಜೊತೆ ಈ ವಿಷಯ ಚರ್ಚಿಸಿದ್ದಾಗಿ ಅವರು ತಿಳಿಸಿ, ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಇರಾನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular