ಪಿರಿಯಾಪಟ್ಟಣ: ಬಿಡುವಿಲ್ಲದ ತಮ್ಮ ಕರ್ತವ್ಯದ ವೇಳೆ ನಡುವೆಯೂ ಪಟ್ಟಣ ಸಾರಿಗೆ ಘಟಕ ನೌಕರ ನಿರ್ವಾಹಕ ಇರ್ಫಾನ್ ಆಲಿ ಅವರು ತಾವು ಕರ್ತವ್ಯ ನಿರ್ವಹಿಸುವ ಪಟ್ಟಣದ ಸಾರಿಗೆ ಘಟಕದ ಮಾದರಿ ರಚಿಸಿ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇರ್ಫಾನ್ ಆಲಿ ಅವರು ತಾವು ರಚಿಸಿದ ಸಾರಿಗೆ ಘಟಕ ಮಾದರಿ ಪ್ರದರ್ಶಿಸಿ ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದರು. ಈ ವೇಳೆ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕುಂ ಇ ಅಹಮದ್ ಅವರು ನಿರ್ವಾಹಕ ಇರ್ಫಾನ್ ಆಲಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
