ಬಹುಸಂಖ್ಯಾತ ಹಿಂದುಗಳಿರುವ ಹಿಂದುಸ್ಥಾನದ ಕರ್ನಾಟಕ ರಾಜ್ಯದ ಮುಖ್ಯ ಧಾರ್ಮಿಕ ಕೇಂದ್ರ, ದೇವಸ್ಥಾನವಾಗಿರುವ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಪ ಪ್ರಚಾರವು ಸಮಸ್ತ ಹಿಂದುಗಳಿಗೆ ಒಂದಾಗಲು ನೀಡುವ ಎಚ್ಚರಿಕೆಯ ಗಂಚೆ ಎಂದರೆ ತಪ್ಪಾಗಲಾರದು
ಹಲವಾರು ವರ್ಷದಿಂದ ಧಾರ್ಮಿಕ ನಂಬಿಕೆಯಿಂದ ಕೋಟ್ಯಾಂತರ ಜನರು ಹೋಗಿ ಬರುತ್ತಿದ್ದರೂ ಏಕಾ ಏಕಿ ಇತರ ಧರ್ಮದ ವ್ಯಕ್ತಿ ಯಾವುದೋ ವಿಷಯವೆತ್ತಿ ಕೆಲವು ಹಿಂದೂ ಬಾಂದವರೊಂದಿಗೆ ಸೇರಿ ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ಮಾಡಿರುವುದು ಜಗಜ್ಜಾಹೀರ.
ಹಿಂದೂ, ಮುಸ್ಲೀಂ ಮತ್ತು ಕ್ರಿಶ್ಚಯನ್ ಬಾಂದವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದಾಗಿ ಬಾಳುತ್ತಿದ್ದರೂ ಸಹ ಕೆಲವು ಪಟ್ಟಬದ್ದ ಹಿತಾಸಕ್ತಿಯನರು ಸೇರಿ ಶ್ರೀ ಕ್ಷೇತ್ರ ದ ಬಗ್ಗೆ ಗೊಂದಲಮಯ ಆರೋಪ ಮಾಡಿ ಹಿಂದುಗಳನ್ನು ಒಡೆಯಲು ಮಾಡಿದ ಪಿತೂರಿಯಂತೆ ಕಾಣಿಸುತ್ತಿತ್ತು. ದೇವಸ್ಥಾನದ ಆಡಳಿತ ಮಂಡಳಿ, ಸರ್ಕಾರ ಮತ್ತು ಸ್ಥಳಿಯರಿಗೂ ಬೆಚ್ಚಿ ಬೀಳಿಸುವಂತ ಗೊಂದಲಮಯ ವಿಷಯ ಹುಟ್ಟುಹಾಕಿದ್ದು ನೋಡಿದರೆ ಇದು ಹಿಂದುಗಳ ಮದ್ಯೆ ತಂದಿಡುವುದು ಜೊತೆ ಇಲ್ಲಿ ಯಶಸ್ಸು ಕಂಡರೆ ಮುಂದೆ ಉಡುಪಿಯ ಕ್ರಷ್ಣಮಠ ಹಾಗೂ ಇತರ ದೇವಸ್ಥಾನಕ್ಕೂ ವಿಸ್ತರಿಸುವ ಹಾಗೆ ಕಾಣಿಸುತ್ತದೆ.
ವಿಶ್ವ ಪ್ರಸಿದ್ದ ಶಬರಿಮಲೈ ದೇವಸ್ಥಾನಕ್ಕೂ ಹಿಂದೆ ದೇವಸ್ಥಾನದ ಹೆಸರು ಹಾಳುಮಾಡಬೇಕೆಂದು ಸಹ ಕೆಲವರು ಪ್ರಯತ್ನಿಸಿರುವುದು ನೆನಪಿಸಿಕೊಳ್ಳೋಣ. ಇಂತಹ ಸನ್ನಿವೇಶ ಯಾವುದೇ ದೇವಸ್ಥಾನಕ್ಕೆ ಬರದಿರಲಿ ಎಂದು ಪ್ರಾರ್ಥಿಸೋಣ.
ಏನೇ ಬರಲಿ ನಾವೆಲ್ಲ ಹಿಂದುಗಳು ಒಂದಾಗಿದರೆ ಮಾತ್ರ ನಮ್ಮ ಸನಾತನ ಧರ್ಮ ಉಳಿಸಬಹುದು ಎಂದು ತಿಳಿಸುತ್ತಾ ಎಲ್ಲಾ ರಾಜಕೀಯ ಪಕ್ಷದವರು ಸಹ ಇಂತಹ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಹೋಗದೇ ಇದ್ದು ನಮ್ಮೆಲ್ಲರ ನಂಬಿಕೆಯ ಶ್ರಧ್ಯಾ ಕೇಂದ್ರ ಇನ್ನೂ ಹೆಚ್ಚಿನ ಜನರ ಬದುಕಿಗೆ ನೆರವಾಗಲಿ ಎಂದು ಪ್ರಾರ್ಥಿಸುತ್ತಾ ಇದು ನಮಗೆಲ್ಲಾ ಒಂದು ಎಚ್ಚರಿಕೆಯ ಗಂಚೆ ಎಂದು ತಿಳಿಯುತ್ತಾ ಒಂದಾಗಿ ಬಾಳೋಣ ಎಂದು ಆಶಿಸುವ ಕೆ ಮಹೇಶ ಕಾಮತ್ ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷದ್.