Tuesday, April 15, 2025
Google search engine

Homeಸಿನಿಮಾವಿನಯ್ ಗೌಡ-ರಜತ್ ಕಿಶನ್ ಮಧ್ಯೆ ಸ್ನೇಹದಲ್ಲಿ ಬಿರುಕು? ಗೊಂದಲದ ಮಧ್ಯೆ ಸ್ಪಷ್ಟನೆ ನೀಡಿದ ವಿನಯ್ ಗೌಡ

ವಿನಯ್ ಗೌಡ-ರಜತ್ ಕಿಶನ್ ಮಧ್ಯೆ ಸ್ನೇಹದಲ್ಲಿ ಬಿರುಕು? ಗೊಂದಲದ ಮಧ್ಯೆ ಸ್ಪಷ್ಟನೆ ನೀಡಿದ ವಿನಯ್ ಗೌಡ

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್ ಕಿಶನ್ ಮಧ್ಯೆ ಸ್ನೇಹದಲ್ಲಿ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ ವಿಚಾರವಾಗಿ ಇಬ್ಬರೂ ವಿವಾದಕ್ಕೆ ಒಳಗಾದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸ್ನೇಹದ ಬಗ್ಗೆಯೂ ಗಾಸಿಪ್ ಶುರುವಾಗಿದೆ. ಆದರೆ ಈ ಎಲ್ಲ ಗೊಂದಲಗಳಿಗೆ ಖುದ್ದು ವಿನಯ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ವಿನಯ್ ಗೌಡ ಮಾತುಗಳಲ್ಲಿ ಸ್ಪಷ್ಟವಾಗಿದೆಯೆಂದರೆ – ರಜತ್ ಅವರ ಜೊತೆಗಿನ ಸ್ನೇಹಕ್ಕೆ ಯಾವುದೇ ತೆರೆ ಇಲ್ಲ. “ಸ್ನೇಹಿತರ ನಡುವೆ ಗಂಡ ಹೆಂಡತಿ ಜಗಳ ಆದಂಥದೇ. ಒಂದೆರಡು ದಿನ ಅಸಮಾಧಾನ ಇದ್ದರೂ ಮತ್ತೆ ಎಲ್ಲವೂ ಸಹಜವಾಗಿಬಿಡುತ್ತೆ. ರಜತ್ ನನ್ನ ಸ್ನೇಹಿತನೇ. ಅವನು ನನ್ನನ್ನು ಬಿಟ್ಟಿಲ್ಲ, ನಾನೂ ಬಿಡೋುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಅವರು ಇನ್ನೂ ಮುಂದೆ ಹೇಳಿದ್ದು ಹೀಗೆ: “ನಮ್ಮಿಬ್ಬರ ಮಧ್ಯೆ ಬ್ರೇಕಪ್ ಅಂತಿಲ್ಲ. ನಾನು ಅವನಿಗಿಂತ ದೊಡ್ಡವನು. ಅವನು ತಪ್ಪು ಮಾಡಿದ ಅಂತ ನಾನು ಬ್ಲೇಮ್ ಮಾಡುವವನಲ್ಲ. ಅವನು ಕರೆದಾಗ ನಾನೂ ಒಪ್ಪಿಕೊಂಡೆ, ಆದರೆ ಅದರಿಂದ ನಾವು ಅನವಶ್ಯಕವಾಗಿ ಜೈಲಿಗೆ ಹೋಗಬೇಕಾಯಿತು. ಇದು ತಪ್ಪು ಎನ್ನುವುದು ನನಗೂ ಗೊತ್ತು. ಆದರೆ ಅವನು ಬಲವಂತ ಮಾಡಿದ ಅಂತ ನಾನು ಹೇಳಿಲ್ಲ.”

ಇದರಿಂದಾಗಿ ತಮ್ಮ ಸ್ನೇಹದಲ್ಲಿ ಅಂತ್ಯವಿಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. “18 ಸೆಕೆಂಡ್ ರೀಲ್ಸ್ ಗೆ 18 ವರ್ಷದ ಸ್ನೇಹವನ್ನು ಬಿಡಲ್ಲ. ಜೈಲಿನಿಂದ ಹೊರಬಂದ ನಂತರ ನಾವು ಒಟ್ಟಿಗೆ ಕಾಣಿಸಿಕೊಳ್ಳದ ಕಾರಣದಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದರೆ, ನಾನು ಕೆಲ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದರಿಂದ ಅನಿವಾರ್ಯತೆಯಿಂದ ಹಾಜರಾಗಲಿಲ್ಲ. ಮುಂದಿನ ವಾರವೂ ಹೋಗೋಕೆ ಆಗಲ್ಲ. ಆದರೆ, ಇವತ್ತಿನವರೆಗೆ ನಮ್ಮ ಸ್ನೇಹ ಮುಗಿದಿಲ್ಲ.”

ಇದಕ್ಕೆ ಪ್ರತಿಕ್ರಿಯೆ ನೀಡಿದ ರಜತ್ ಕಿಶನ್ ಅವರು, “ನಾನು ಮತ್ತು ವಿನಯ್ ಕಳೆದ 11 ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಬಿಗ್ ಬಾಸ್ ಗೆ ಹೋಗುವ ಮೊದಲುನೇ ಪರಿಚಯವಿತ್ತು. ಜೈಲಿನಿಂದ ಬಂದ ಮೇಲೆ ನಾನು ಮಾಧ್ಯಮಗಳಿಗೆ ಮಾತನಾಡಬೇಡ ಎಂದು ವಿನಯ್ ಹೇಳಿದ್ದಾರೆ. ಆದರೆ ನಂತರ ತಾನೇ ಕ್ಷಮೆ ಕೇಳಿದ ವಿಡಿಯೋ ಹಾಕಿದ್ದಾರೆ. ಈಗ ಎಲ್ಲರೂ ನನ್ನಿಂದಲೇ ಎಲ್ಲಾ ಆಯ್ತು ಎಂಬ ಶಬ್ದ ಮಾಡ್ತಿದ್ದಾರೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ, ವಿನಯ್ ಗೌಡ ಮತ್ತು ರಜತ್ ಕಿಶನ್ ನಡುವೆ ಕೆಲವು ಮಿತವಾದ ಭಿನ್ನಾಭಿಪ್ರಾಯಗಳಿದ್ದರೂ, ಅವರ ಸ್ನೇಹ ಬಿಕ್ಕಟ್ಟಿನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಕೆಲ ಕಾಲದ ಅಸಮಾಧಾನವು ಸಹಜವಾಗಿದ್ದು, ಅವರು ತಮ್ಮ ಸ್ನೇಹವನ್ನು ಮುಂದುವರಿಸೋ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular