ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಈಶ್ವರ್ ಎಂ.ಎಸ್. ಅಧಿಕಾರ ಸ್ವೀಕರಿಸಿದರು.
ತೆರಕಣಾಂಬಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಮಂಜುನಾಥನಾಯಕ್ ವರ್ಗಾವಣೆಗೊಂಡ ಸ್ಥಳಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈಶ್ವರ್ ಎಂ.ಎಸ್. ಅವರನ್ನು ನೇಮಕ ಮಾಡಿದ ಹಿನ್ನೆಲೆ ನೂತನ ಸಬ್ ಇನ್ಸ್‍ಪೆಕ್ಟರ್ ಆಗಿ ಈಶ್ವರ್ ಎಂ.ಎಸ್. ಅಧಿಕಾರ ವಹಿಸಿಕೊಂಡರು. ತೆರಕಣಾಂಬಿ ಠಾಣೆಯಿಂದ ವರ್ಗಾವಣೆಗೊಂಡ ಮಂಜುನಾಥನಾಯಕ್ ಅವರನ್ನು ಚಾಮರಾಜನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ತೆರಕಣಾಂಬಿ ಠಾಣೆಯ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಈಶ್ವರ್ ಎಂ.ಎಸ್. ಅವರಿಗೆ ಠಾಣೆಯ ಪೊಲೀಸರು ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದರು.