ಬಾಂಗ್ಲಾದೇಶ: ಬಾಂಗ್ಲಾದೇಶದ ರಾಜಧಾನಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ನವೆಂಬರ್ 25, 2024ರಂದು ಇಸ್ಕಾನ್ ಸಂಸ್ಥೆಯ ಮಾಜಿ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧಿಸಲಾಗಿತ್ತು. ದೇಶದ್ರೋಹದ ಆರೋಪವಿದ್ದ ಅವರಿಗೆ ಐದು ತಿಂಗಳ ನಂತರ ಚಿತ್ತಗಾಂಗ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇವರು ಇಸ್ಕಾನ್‌ನ ಪ್ರಮುಖರಾದಷ್ಟೇ ಅಲ್ಲದೆ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸನಾತನ ಜಾಗರಣ್ ಮಂಚ್ ವಕ್ತಾರರಾಗಿದ್ದ ಚಿನ್ಮಯ್, ಹಿಂದೂಗಳ ಮೇಲೆ ನಡೆಯುವ ಹಿಂಸಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರ ತಪ್ಪಿದ ಬಳಿಕ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಮತ್ತಷ್ಟು ದುರ್ಬಲವಾಗಿದೆ ಎಂದು ಅವರು ಟೀಕಿಸಿದ್ದರು.