Thursday, January 1, 2026
Google search engine

Homeರಾಜ್ಯಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇತ್ಯಾದಿಗಳು ಧರ್ಮಗಳಲ್ಲ : ನಿಡಸೋಸಿ ಶ್ರೀ

ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇತ್ಯಾದಿಗಳು ಧರ್ಮಗಳಲ್ಲ : ನಿಡಸೋಸಿ ಶ್ರೀ

ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇತ್ಯಾದಿಗಳು ಧರ್ಮಗಳಲ್ಲ, ಬದಲಿಗೆ ಮತಗಳಾಗಿವೆ. ಇವು ಧರ್ಮದ ಆಳವಾದ ತತ್ವಗಳಿಗಿಂತ, ಮಾನವ ನಿರ್ಮಿತ ಸಂಪ್ರದಾಯಗಳನ್ನು ಹೆಚ್ಚಾಗಿ ಪಾಲಿಸುತ್ತವೆ ಇವುಗಳನ್ನು ಧರ್ಮ ಎಂದು ಹೇಳುತ್ತಿರುವುದಕ್ಕೆ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ನಿಡುಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಸಿದ್ದೇಶ್ವರ ಸ್ವಾಮಿಗಳ 3ನೇ ವರ್ಷದ ಗುರುನಮನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೈಸ್ತ ಧರ್ಮವು ಸಮಾನತೆ ಮತ್ತು ವಿಶ್ವಶಾಂತಿಯ ಸಂದೇಶವನ್ನು ನೀಡುತ್ತದೆ. ಶ್ರೀಗಳು ಹಿಂದೂ ಧರ್ಮದಲ್ಲಿರುವ ತಾರತಮ್ಯವನ್ನು ಟೀಕಿಸಿ, ಸಮಾನತೆ ಸಂದೇಶ ಸಾರುವ ಕ್ರೈಸ್ತ ಧರ್ಮವನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎಂಬುದು ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಅಲ್ಲದೆ ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ಜಾತಿ, ಮತಗಳನ್ನು ಮಾಡಿಕೊಂಡಿದ್ದೇವೆ, ಆದರೆ ನಾವೆಲ್ಲರೂ ದಯೆ ಧರ್ಮವನ್ನು ಪಾಲಿಸಬೇಕು ಎಂದರು.

ಇಸ್ಲಾಂ, ಹಿಂದೂ, ಕ್ರೈಸ್ತ ಮುಂತಾದವುಗಳು ನಿಜವಾದ ಧರ್ಮಗಳಲ್ಲ, ಆದರೆ ಮಾನವರಿಂದ ಸೃಷ್ಟಿಸಲ್ಪಟ್ಟ ಮತಗಳು, ಹಿಂದೂ ಧರ್ಮದಲ್ಲಿ ತಾರತಮ್ಯ ಹೆಚ್ಚಿದೆ. ಸಮಾನತೆ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಸಾರುವ ಕ್ರೈಸ್ತ ಧರ್ಮವು ಜಗತ್ತನ್ನು ಆವರಿಸಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular