Wednesday, April 9, 2025
Google search engine

Homeವಿದೇಶಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾ ಹತ್ಯೆ

ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾ ಹತ್ಯೆ

ಟೆಹರಾನ್: ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾ ಮತ್ತು ಆತನ ಭದ್ರತಾ ಸಿಬಂದಿಗಳು ನಿವಾಸದಲ್ಲೇ ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ನ ಭದ್ರತಾ ಸಂಸ್ಥೆ ಐಆರ್ ಜಿಸಿ ಖಚಿತಪಡಿಸಿದೆ.

ಇಸ್ಮಾಯಿಲ್ ಹನ್ಯಾ ಟೆಹರಾನ್ ಗೆ ಇರಾನ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.

Islamic Revolutionary Guard Corps ಸಾರ್ವಜನಿಕ ಸಂಪರ್ಕ ಇಲಾಖೆ ಬುಧವಾರ ಬೆಳಗ್ಗೆ ದಾಳಿ ನಡೆದಿದೆ ಮತ್ತು ಕಾರಣವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಘೋಷಿಸಿದೆ. ಹಮಾಸ್ ನಾಯಕನನ್ನು ಕಳೆದುಕೊಂಡಿರುವ ಪ್ಯಾಲೆಸ್ತೀನ್ ಜನರಿಗೆ, ಮುಸ್ಲಿಂ ಸಮುದಾಯಕ್ಕೆ ಮತ್ತು ರೆಸಿಸ್ಟೆನ್ಸ್ ಫ್ರಂಟ್‌ನ ಹೋರಾಟಗಾರ ಪರ ಸಂತಾಪ ಸೂಚಿಸಿದೆ.

ಹಿಂದಿನ ದಿನ, ಹನ್ಯಾ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಇರಾನ್‌ನ ಸರ್ವೋಚ್ಚ ನಾಯಕರನ್ನು ಭೇಟಿಯಾಗಿದ್ದ.

ಹತ್ಯೆಯ ಹೊಣೆಗಾರಿಕೆಯನ್ನು ಯಾರೂ ತತ್ ಕ್ಷಣವೇ ಹೊತ್ತುಕೊಂಡಿಲ್ಲ, ಇಸ್ಮಾಯಿಲ್ ಹನ್ಯಾ ಮತ್ತು ಎಲ್ಲ ಹಮಾಸ್ ನಾಯಕರನ್ನು ಮುಗಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಇಸ್ರೇಲ್‌ನ ಮೇಲೆ ಅನುಮಾನ ಹೆಚ್ಚಾಗಿದೆ.

ಏಪ್ರಿಲ್ 10 ರಂದು, ಉತ್ತರ ಗಾಜಾದಲ್ಲಿ ಇಸ್ರೇಲಿ ದಾಳಿಯು ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನ್ಯಾನ ಮೂವರು ಪುತ್ರರನ್ನು ಹತ್ಯೆಗೈದಿತ್ತು. ಹಜೆಮ್, ಅಮೀರ್ ಮತ್ತು ಮೊಹಮ್ಮದ್ ಮತ್ತು ಹಲವಾರು ಮೊಮ್ಮಕ್ಕಳ ಸಾವನ್ನು ಇಸ್ಮಾಯಿಲ್ ಹನ್ಯಾ ದೃಢಪಡಿಸಿದ್ದ.

RELATED ARTICLES
- Advertisment -
Google search engine

Most Popular