ಗಾಜಾ: ಗಾಝಾದ ಮನೆಯೊಂದರ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ ಪರಿಣಾಮ ೬ ಮಕ್ಕಳು ಸೇರಿದಂತೆ ೯ ಮಂದಿ ಮೃತಪಟ್ಟಿದ್ದಾರೆ. ರಫಾದ ಆಸ್ಪತ್ರೆಯೊಂದರ ದಾಖಲೆಗಳ ಪ್ರಕಾರ, ೬ ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಗಾಝಾದ ರಕ್ಷಣಾ ಪಡೆ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಇಸ್ರೇಲ್ ದಾಳಿಯಿಂದಾಗಿ ೩೭ ಮಂದಿ ಮೃತಪಟ್ಟಿದ್ದು, ೬೮ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗಾಝಾದ ರಕ್ಷಣಾ ಪಡೆ ಇಂದು ತಿಳಿಸಿದೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಈವರೆಗೆ ಪ್ಯಾಲೆಸ್ಟಿನ್‌ನ ೩೪,೦೪೯ ಮಂದಿ ಮೃತಪಟ್ಟಿದ್ದು, ೭೬,೯೦೧ ಮಂದಿ ಗಾಯಗೊಂಡಿದ್ದಾರೆ ‘ ಎಂದು ಗಾಜಾದ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.