Friday, April 11, 2025
Google search engine

Homeಅಪರಾಧಗಾಝಾದ ಮೇಲೆ ಇಸ್ರೇಲ್ ದಾಳಿ: 35 ಮಂದಿ ಸಾವು

ಗಾಝಾದ ಮೇಲೆ ಇಸ್ರೇಲ್ ದಾಳಿ: 35 ಮಂದಿ ಸಾವು

ಗಾಝಾ: ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲು ಪ್ಯಾಲೆಸ್ತೀನ್‌ನಲ್ಲಿ ಅಭಿಯಾನ ನಡೆಯುತ್ತಿದ್ದು, ಈ ನಡುವೆ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿದೆ.

ಈ ದಾಳಿಯಿಂದಾಗಿ ೩೫ ಮಂದಿ ಸಾವನ್ನಪ್ಪಿದ್ದಾರೆ. ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕುವ ನಿಟ್ಟಿನಲ್ಲಿ ಮಧ್ಯ ಗಾಜಾದಲ್ಲಿ ಯುದ್ಧಕ್ಕೆ ಭಾಗಶಃ ವಿರಾಮವನ್ನು ಘೋಷಿಸಲಾಗಿತ್ತು. ಈ ದಿನವನ್ನು ಮತ್ತಷ್ಟು ವಿಸ್ತರಿಸಿ ಮಕ್ಕಳಿಗೆ ಪೋಲಿಯೊ ಲಸಿಕೆಗಳನ್ನು ಹಾಕಲು ವೈದ್ಯರಿಗೆ ಅವಕಾಶ ನೀಡಲಾಗಿದೆ. ಆದರೂ ಇಸ್ರೇಲ್ ಪಡೆಗಳು ಗಾಜಾದಾದ್ಯಂತ ದಾಳಿ ನಡೆಸಿ ಕನಿಷ್ಠ ೩೫ ಮಂದಿಯನ್ನು ಕೊಂದಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular