Friday, April 4, 2025
Google search engine

Homeವಿದೇಶಲೆಬನಾನ್ ಮೇಲೆ ಇಸ್ರೇಲ್ ದಾಳಿ 20 ಸಾವು

ಲೆಬನಾನ್ ಮೇಲೆ ಇಸ್ರೇಲ್ ದಾಳಿ 20 ಸಾವು

ಬೈರೂತ್ : ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣದ ಬಾರ್ಜಾ ನಗರದ ಮೇಲೆ ಮಂಗಳವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ೨೦ ಜನರು ಮೃತಪಟ್ಟಿರುವುದಾಗಿ ಲೆಬನಾನ್‌ನ ಆರೋಗ್ಯ ಇಲಾಖೆ ಹೇಳಿದೆ.

ರಾಜಧಾನಿಯ ದಕ್ಷಿಣದಲ್ಲಿರುವ ಕರಾವಳಿ ನಗರ ಬಾಜ್ರಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ೨೦ ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್‌ನ ಟೈರ್ ಜಿಲ್ಲೆ ಮತ್ತು ನಬಾತಿಯೆ ಪ್ರಾಂತದ ಹಲವು ನಗರಗಳ ಮೇಲೆಯೂ ದಾಳಿ ನಡೆದಿದ್ದು ಸಾವು-ನೋವಿನ ವರದಿಯಾಗಿಲ್ಲ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ. ಲೆಬನಾನ್ ನಿಂದ ಮಧ್ಯ ಮತ್ತು ಉತ್ತರ ಇಸ್ರೇಲ್‌ನತ್ತ ಕನಿಷ್ಠ ೧೦ ರಾಕೆಟ್‌ಗಳನ್ನು ಪ್ರಯೋಗಿಸಲಾಗಿದ್ದು ಬಹುತೇಕ ರಾಕೆಟ್‌ಗಳನ್ನು ತುಂಡರಿಸಲಾಗಿದೆ. ಆದರೆ ಒಂದು ರಾಕೆಟ್ ಜನವಸತಿ ಇಲ್ಲದ ಪ್ರದೇಶಕ್ಕೆ ಅಪ್ಪಳಿಸಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಉತ್ತರ ಗಾಝಾದ ಬೀತ್ ಲಾಹಿಯಾ ಪಟ್ಟಣ ಮತ್ತು ನುಸೆರಾತ್ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆಯಿಂದ ಇಸ್ರೇಲ್ ವ್ಯಾಪಕ ವೈಮಾನಿಕ ದಾಳಿ ಮುಂದುವರಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

RELATED ARTICLES
- Advertisment -
Google search engine

Most Popular