ಶ್ರೀಹರಿಕೋಟಾ: ಭಾರತೀಯ ಬಾಹ್ಯಾ ಕಾಶ ಸಂಸ್ಥೆ ಶ್ರೀಹರಿ ಕೋಟಾ ದಿಂದ ತನ್ನ 100ನೇ ರಾಕೆಟ್ ಉಡಾವ ಣೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಜ.29ರಂದು ಜಿಎಸ್‌ಎಲ್‌ವಿ ಎಫ್-15 ರಾಕೆಟ್ ಉಡಾವಣೆ ಮಾಡುವ ಮೂಲಕ ಈ ಮೈಲಿಗಲ್ಲನ್ನು ಇಸ್ರೋ ದಾಟಲಿದೆ.
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ 2ನೇ ಲಾಂಚ್ ಪ್ಯಾಡ್ ಮೂಲಕ ಈ ಉಡಾವಣೆಯನ್ನು ಕೈಗೊಳ್ಳಲಾಗುತ್ತದೆ. ಭಾರತ ಸ್ವಂತದ ನ್ಯಾವಿಗೇಶನ್ ಹೊಂದಲು ಭಾರತ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಅವಶ್ಯವಿರುವ ಎನ್‌ವಿಎಸ್-02 ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ.
ಇದು ಜಿಎಸ್‌ಎಲ್‌ವಿಯ 17ನೇ ಉಡಾವಣೆಯಾಗಿದೆ. ದೇಸಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಬಳಸಿ ಇದು 11ನೇ ಉಡಾವಣೆಯಾಗಿದೆ. 1971ರ ಅ.9ರಂದು ಶ್ರೀಹರಿಕೋಟಾದಿಂದ ಮೊದಲ ರಾಕೆಟನ್ನು ಉಡಾವಣೆ ಮಾಡಲಾಗಿತ್ತು. ಗೂಗಲ್ ಮ್ಯಾಪ್ ಮಾದರಿಯಲ್ಲಿ “ನಾವಿಕ್’ ಎಂಬ ನ್ಯಾವಿಗೇಶನ್ ವ್ಯವಸ್ಥೆ ಹೊಂದಲು ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ಇದು ಕೃಷಿ, ರಕ್ಷಣೆ, ಸಂಚಾರ ಕ್ಷೇತ್ರಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ ಎನ್ನಲಾಗಿದೆ.