ಮಡಿಕೇರಿ : ಕುಶಾಲನಗರ ತಾಲ್ಲೂಕು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಸಾಮಾಜಿಕ ಹಿಂದುಳಿದ ವರ್ಗದ ಜೇನುಕುರುಬ ಸಮುದಾಯದ ಶ್ರೀ ವಿನೋದ್ ಜೆ.ಇ.ಮಾವಿನಹಳ್ಳ ಹಾಡಿ, ರಂಗಸಮುದ್ರ ಗ್ರಾಮ, ಕುಶಾಲನಗರ ತಾಲ್ಲೂಕು ಇವರಿಗೆ (ಶ್ರೀ ಅವಿನಾಶ್ ಜೆ.ಎಸ್ ಗೈಡ್) ಜಿಲ್ಲಾಧಿಕಾರಿಗಳು ಅನುಮೋದಿಸಿ ನಿರ್ದೇಶಿಸಿದಂತೆ ರ್ಯಾಫ್ಟಿಂಗ್ ಪರವಾನಿಗೆಯನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಪ್ರವಾಸೋದ್ಯಮ ಇಲಾಖೆಯಲ್ಲಿ ವಿತರಿಸಿದರು.
ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಜೇನುಕುರುಬ ಸಮುದಾಯಕ್ಕೆ ಸೇರಿದ ಯುವಕರಿಗೆ ರ್ಯಾಪ್ಟಿಂಗ್ ಪರವಾನಿಗೆಯನ್ನು ನೀಡಿರುವುದು ಒಂದು ಸಾಮಾಜಿಕ ಮೈಲಿಗಲ್ಲಾಗಿದೆ ಹಾಗೂ ಜೇನುಕುರುಬ ಸಮುದಾಯದವರು ಆರ್ಥಿಕವಾಗಿ ಸಬಲೀಕರಣಗೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅನಿತಾ ಭಾಸ್ಕರ್ ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಲೋಚಕರಾದ ಜತೀನ್ ಬೋಪಣ್ಣ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂಧಿಗಳಾದ ಶ್ವೇತ ಹಾಗೂ ದಿನೇಶ್‍ರವರು ಉಪಸ್ಥಿತರಿದ್ದರು