ಚಾಮರಾಜನಗರ: ಸಮಾನತೆಯ ಹರಿಕಾರ ಶ್ರೀ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವ ಹಾಗೂ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸರ್ಕಾರದ ಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಸ್ವಾಗತಿಸಿ ಅಭಿನಂದಿಸಿದ್ದಾರೆ.
ಕರ್ನಾಟಕ ಸರ್ಕಾರವು 12ನೇ ಶತಮಾನದ ಶ್ರೀ ಬಸವಣ್ಣನವರ ತತ್ವ ,ಚಿಂತನೆ, ಆದರ್ಶ ಗಳನ್ನು ಯುವಕರು ಮತ್ತು ಸಮಾಜದಲ್ಲಿ ಶಾಶ್ವತವಾಗಿ ಚಿಂತನೆಗೆ ಅವಕಾಶ ಮಾಡಿಕೊಟ್ಟು ಸಾಂಸ್ಕೃತಿಕ ನಾಯಕರಾಗಿ ಘೋಷಿಸಿರುವುದು ಹೆಮ್ಮೆ ಹಾಗೂ ಗೌರವ ಹೆಚ್ಚಿಸಿದೆ ಎಂದು ಋಗ್ವೇದಿ ತಿಳಿಸಿ ಅಭಿನಂದಿಸಿದ್ದಾರೆ.