Saturday, April 19, 2025
Google search engine

Homeಸ್ಥಳೀಯಜುಲೈ ೩ರಂದು ಶ್ರೀ ಚಾಮರಾಜೇಶ್ವರ ರಥೋತ್ಸವ ಅದ್ದೂರಿಯಾಗಿ ಆಚರಿಸಲು ತೀರ್ಮಾನ

ಜುಲೈ ೩ರಂದು ಶ್ರೀ ಚಾಮರಾಜೇಶ್ವರ ರಥೋತ್ಸವ ಅದ್ದೂರಿಯಾಗಿ ಆಚರಿಸಲು ತೀರ್ಮಾನ


ಚಾಮರಾಜನಗರ : ಶ್ರೀ ಚಾಮರಾಜೇಶ್ವರ ರಥೋತ್ಸವವನ್ನು ವಿಜೃಂಭಣೆಯ ಆಚರಣೆ ಮಾಡಲು ತೀರ್ಮಾನಿಸಲಾಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ನಡೆದ ಮುಖಂಡರ ಸಭೆಯಲ್ಲಿ ತಹಸಿಲ್ದಾರ್ ಬಸವರಾಜು ಮಾತನಾಡಿ,ಕಳೆದ ವರ್ಷ ರಥೋತ್ಸವ ಅದ್ದೂರಿಯಾಗಿ ಎಲ್ಲರ ಸಮ್ಮುಖದಲ್ಲಿ ಜನಾಂಗದ ಮುಖಂಡರ ಸಹಕಾರದೊಂದಿಗೆ ಜರುಗಿತು ಆದ್ದರಿಂದ ಈ ಬಾರಿಯು ರಥೋತ್ಸವವು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು. ಈ ರಥೋತ್ಸವವು ಪ್ರತಿವರ್ಷವೂ ಆಷಾಢ ಮಾಷದಲ್ಲಿ ನಡೆಯುವ ರಥೋತ್ಸವವಾಗಿದೆ.ಈ ಬಾರಿ ಕೋವಿಡ್ ಇಲ್ಲ. ಜೊತೆಗೆ ಸರ್ಕಾರವು ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವಕ್ಕೆ ಆಗಮಿಸಿ ಯಶಸ್ವಿಯಾಗಿ ಜರುಗಲು ಸಹಕರಿಸಬೇಕು.ಜೂನ್ ೩೦ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಬೆಳಿಗ್ಗೆ ೧೦:೩೦ಕ್ಕೆ ಈ ವಿಚಾರವಾಗಿ ಸಭೆ ಕರೆದಿರುತ್ತಾರೆ ಎಲ್ಲಾ ಮುಖಂಡರು ಅಲ್ಲಿಗೆ ಬರಬೇಕು. ಅಂದು ತೇರು ಸಾಗುವ ಎಲ್ಲಾ ಕಡೆ ಮರಳು ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ರಥೋತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ದೇವಸ್ಥಾನದ ಸುತ್ತ ತೇರು ಸಾಗುವ ಕಡೆಗಳಲ್ಲಿ ವಿದ್ಯುತ್ ದೀಪ ಅಲಂಕಾರ ಅಳವಡಿಸಬೇಕು ಅಲ್ಲದೆ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಿರಬೇಕು ಎಂದು ಪೊಲೀಸ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಗೀತಾ ಹುಡೇದ, ನಗರ ಸಭೆ ಸದಸ್ಯರಾದ ಚಿನ್ನಮ್ಮ,ಭಾಗ್ಯಮ್ಮ, ಸುದರ್ಶನ್ ಗೌಡ,ನೀಲಮ್ಮ, ನಗರಸಭೆ ಆಯುಕ್ತ ರಾಮದಾಸ್, ಪಟ್ಟಣದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್, ದೇವಸ್ಥಾನದ ಪ್ರಧಾನ ಅರ್ಚಕ ಅನಿಲ್ ದೀಕ್ಷಿತ್,ದೇವಸ್ಥಾನದ ಆಗಮಿಕ ದರ್ಶನ್, ಮುಖಂಡರಾದ ಮಹೇಶ್ ಸೇರಿದಂತೆ ಇತರರಿದ್ದರು.

RELATED ARTICLES
- Advertisment -
Google search engine

Most Popular