Wednesday, April 2, 2025
Google search engine

Homeರಾಜಕೀಯಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್‌ರನ್ನ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ: ಎಂ.ಬಿ ಪಾಟೀಲ್

ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್‌ರನ್ನ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ: ಎಂ.ಬಿ ಪಾಟೀಲ್

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ ಅಂತ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ನಾನು ಏನು ಹೇಳಲ್ಲ. ಆದ್ರೆ ಅವರು ನಮ್ಮ ಪಕ್ಷಕ್ಕೆ ಯಾವುದೇ ಅರ್ಜಿ ಹಾಕಿಲ್ಲ. ಹಾಕಿದರು ಕೂಡ ನಮ್ಮಲ್ಲಿ ಅವರನ್ನು ಸೇರಿಸಿಕೊಳ್ಳುವುದು ಕಷ್ಟ ಇದೆ. ಅವರು ಒಂದು ಸಮಾಜದ (ಮುಸ್ಲಿಂ) ವಿರುದ್ಧ ಬಹಳಷ್ಟು ಮಾತನಾಡಿದ್ದಾರೆ. ಈ ಕಾರಣ ನಮ್ಮಲ್ಲಿ ಅವರನ್ನ ಸೇರಿಸಿಕೊಳ್ಳುವುದು ಕಷ್ಟ ಎಂದರು.

ಮುಂದುವರೆದು ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣ ನೋಡಿಕೊಳ್ಳಲು ಗೃಹ ಸಚಿವರು, ಪೊಲೀಸರು ಇದ್ದಾರೆ. ಅವರು ಪ್ರಕರಣವನ್ನ ಬಯಲಿಗೆ ಎಳೆಯುತ್ತಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular