Friday, April 18, 2025
Google search engine

Homeರಾಜ್ಯಸುದ್ದಿಜಾಲಮಾಜಿ ಶಾಸಕರು ಹಾಲಿ ಶಾಸಕರ ಮೇಲೆ ಆರೋಪ ಮಾತನಾಡುವುದು ಸತ್ಯಕ್ಕೆ ದೂರವಾಗಿದೆ- ಲಕ್ಕೂರು ಗಿರೀಶ್

ಮಾಜಿ ಶಾಸಕರು ಹಾಲಿ ಶಾಸಕರ ಮೇಲೆ ಆರೋಪ ಮಾತನಾಡುವುದು ಸತ್ಯಕ್ಕೆ ದೂರವಾಗಿದೆ- ಲಕ್ಕೂರು ಗಿರೀಶ್

ಗುಂಡ್ಲುಪೇಟೆ: ರಾಷ್ಟ್ರ ನಾಯಕರ ಆಚರಣೆ ಸಭೆಗಳನ್ನು ನಡೆಸುವುದು ಅದರಲ್ಲಿ ಪಕ್ಷದ ಮುಖಂಡರು ಭಾಗಿಯಾಗುವುದು ಸಹಜ. ಸಾಮಾಜಿಕ ನ್ಯಾಯ ಇರುವುದಾದರೇ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ, ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಶಾಸಕರು ಮೊದಲ ಸ್ಥಾನದಲ್ಲಿ ಇದ್ದಾರೆ.

ಕ್ಷೇತ್ರದ ಮಾಜಿ ಶಾಸಕ ನಿರಂಜನ್ ರವರೆ ನೀವು ಕೆಲವು ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡಿಸುತ್ತಿದಿರಾ ನಿಮ್ಮ ಬೆಂಬಲಗರ ಕೈಯಲ್ಲಿ ಪ್ರೆಸ್ ಮೀಟ್ ಮಾಡಿಸುವುದು ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿಸುತ್ತಿರುವುದು ಆಧಾರ ರಹಿತವಾಗಿದೆ ಅಲ್ಲವೇ ..ನಿಮ್ಮ ಆಡಳಿತದ ಅವಧಿಯಲ್ಲಿ ದಲಿತರಿಗೆ ನಿಮ್ಮ ಕೊಡುಗೆ ಏನು?

ಮಾಜಿ ಶಾಸಕರೆ ಅಧಿಕಾರದ ಆಸೆ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಬಿಜೆಪಿ ಮುಳುಗುವ ಹಡಗು ನಮ್ಮ ಶಾಸಕರೆ ನಿಮಗೆ ಅಧಿಕಾರ ಕೊಡಿಸುತ್ತಾರೆ.

ಮಾಜಿ ಶಾಸಕರು ನೀವು ಏನೇ ಮಾತನಾಡಿದರು..ಜನರು ಗಮನಿಸುತ್ತಿದ್ದಾರೆ. ನಿಮ್ಮ ಮಾತು ತಾಲ್ಲೂಕು ಪಂಚಾಯತ ಹಾಗೂ ಜಿಲ್ಲೆ ಪಂಚಾಯತ ಚುನಾವಣಾಗೆ ಉಪಯೋಗವಾಗಲ್ಲ.ನಾವು ಆರಕ್ಕೆ ಆರು ಕಾಂಗ್ರೆಸ್ ಪಾಲಾಗುತ್ತದೆ.

ಮಾನ್ಯ ಮಾಜಿ ಶಾಸಕರಾದ ನಿರಂಜನ್ ಕುಮಾರ್ ರವರು ನಮ್ಮ ಶಾಸಕರ ವಿರುದ್ಧ ಅಸೂಯೆ. ಹೊಟ್ಟೆಕಿಚ್ಚಿನ ಹೇಳಿಕೆ ಬಾಲಿಶ ಹೇಳಿಕೆ ಆಗಿದೆ

ಶಾಸಕರಾದ ಹೆಚ್ ಎಂ ಗಣೇಶ ಪ್ರಸಾದ್ ಅವರ ಕಾರ್ಯ ವೈಖರಿ ಅವರ ನಾಯಕತ್ವದ ಗುಣವನ್ನು ಸಹಿಸಲು ಆಗದೆ ಅವರ ವಿರುದ್ಧ ಇಲ್ಲಸಲ್ಲದೆ ಆರೋಪ ಮಾಡುವುದು ಹಾಸ್ಯಾಸ್ಪದ ವಾಗಿದೆ.

ಗಣೇಶ ಪ್ರಸಾದ್ ಅವರು ಎಲ್ಲಾ ಸಮಾಜದ ಮುಖಂಡರಗಳು ಎಲ್ಲಾ ಧರ್ಮದ ಮುಖಂಡರಗಳು ಹಾಗೂ ಪಕ್ಷಾತೀತಾವಾಗಿ ಕೆಲಸ ಮಾಡುವು ನಿಮ್ಮ ಇನ್ನೂ ಅನೇಕ ಬಾರಿ ಮಾಜಿ ಶಾಸಕರಾಗಿ ಇರುವ ಆಗೆ ಮಾಡುತ್ತಾರೆ ಅನ್ನುವುದು ನಿಮಗೆ ಗೊತ್ತಾಗಿದೆ ಅಲ್ಲವೇ ..

ನಿಮ್ಮ ಐದು ವರ್ಷಗಳ ಕಾಲದಲ್ಲಿ ಹಳ್ಳಿಯಿಂದ ಡೆಲ್ಲಿ ವರೆಗೂ ನಿಮ್ಮದೆ ಸರ್ಕಾರ ಇತ್ತು ಆ ಸಮಯದಲ್ಲಿ ತಾಲೋಕಿಗೆ ನಿಮ್ಮ ಕೊಡುಗೆ ಏನು ಅ ಸಂದರ್ಭದಲ್ಲಿ ನಿಮಗೆ ಕ್ಷೇತ್ರದ ಜನರು ಸಮಸ್ಯೆ ಕಾಣಲಿಲ್ಲವೆ..

ಮಾಜಿ ಶಾಸಕರೆ ನೀವು ಆರೋಪ ಮಾಡುವುದು ಸತ್ಯಕ್ಕೆ ದೂರವಾಗಿದೆ.. ನಮ್ಮ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಆಗಾಗಿ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಮುಳುಗು ಹಡಗು ಎನ್ನುವುದ ಮರೆಯಬೇಡಿ ನಮ್ಮ ಶಾಸಕರ ಜನ ಪ್ರೀಯತೆ ನಿಮ್ಮನ್ನು ನಿದ್ದೆಕೆಡಿಸಿದೆ ಎಂದು ಮಾಜಿ ಶಾಸಕ ನಿರಂಜನ್ ವಿರುದ್ದ ಪತ್ರಿಕಾ ಹೇಳಿಕೆಯಲ್ಲಿ ಲಕ್ಕೂರು ಗಿರೀಶ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular