Tuesday, April 22, 2025
Google search engine

Homeಸ್ಥಳೀಯಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಕರ್ತವ್ಯ: ಪೇಜಾವರ ಶ್ರೀ

ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಕರ್ತವ್ಯ: ಪೇಜಾವರ ಶ್ರೀ

ಮೈಸೂರು: ವಿಜಯ ವಿಠಲ ವಿದ್ಯಾಶಾಲೆಯಲ್ಲಿ ‘ಸಾಧಕರ ದಿನದ ಸಂಭ್ರಮ’ ವನ್ನು ಇಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ವಿಶೇಷೆತೆ ಎಂದರೆ ವಿಜಯ ವಿಠಲ ವಿದ್ಯಾ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ೨೦೨೨ – ೨೩ನೇ ಶೈಕ್ಷಣಿಕ ವರ್ವದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ,ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ೨೦೨೩ – ೨೪ನೇ ಶೈಕ್ಷಣಿಕ ವರ್ವದ ತರಗತಿವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ,ಪ್ರಶಸ್ತಿ ಪತ್ರ ಹಾಗೂ ಗಿಫ್ಟ್ ಓಚರ್ ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ‘ಪ್ರತಿಭಾ ಪುರಸ್ಕಾರದ’ ಹೆಸರಿನಲ್ಲಿ ಶ್ರೀಗಳು ಮತ್ತು ವೇದಿಕೆಯ ಮೇಲಿನ ಗಣ್ಯರು ಆಶೀರ್ವದಿಸಿದರು.

RELATED ARTICLES
- Advertisment -
Google search engine

Most Popular