Sunday, April 20, 2025
Google search engine

Homeಸ್ಥಳೀಯಗಿಡಗಳನ್ನು ನೆಟ್ಟು ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಪ್ರೋ.ಮಹೇಶಪ್ಪ ಪಿ.ಟಿ

ಗಿಡಗಳನ್ನು ನೆಟ್ಟು ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಪ್ರೋ.ಮಹೇಶಪ್ಪ ಪಿ.ಟಿ

ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉದ್ಯಾನವನದಲ್ಲಿ ಹಲಸು, ಮಾವು, ಅಘನಾಶಿನಿ, ಬಿಲ್ವಪತ್ರೆ , ನೇರಳೆ, ಸಂಪಿಗೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗಿಡಗಳನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೋ. ಮಹೇಶಪ್ಪ ಪಿ .ಟಿ ಅವರ ಮಾರ್ಗದರ್ಶನದಲ್ಲಿ ನೆಡಲಾಯಿತು.

ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉದ್ಯಾನವನದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಹಭಾಗಿತ್ವದಲ್ಲಿ ವನಮಹೋತ್ಸವ ಆಚರಿಸಲಾಯಿತು. ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉದ್ಯಾನವನದಲ್ಲಿ ಹಲಸು, ಮಾವು, ಅಘನಾಶಿನಿ, ಬಿಲ್ವಪತ್ರೆ , ನೇರಳೆ, ಸಂಪಿಗೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗಿಡಗಳನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೋ. ಮಹೇಶಪ್ಪ ಪಿ .ಟಿ ಅವರ ಮಾರ್ಗದರ್ಶನದಲ್ಲಿ ನೆಡಲಾಯಿತು.

ಈ ವನಮಹೋತ್ಸವಕ್ಕೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಯ ಮುಖ್ಯ ಅಧಿಕಾರಿ ಶ್ರೀಧರ್, ಆರೋಗ್ಯಾಧಿಕಾರಿ ಪರಮೇಶ್ವರ್ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೋ‌. ಮಹೇಶಪ್ಪ ಪಿ ಟಿ ಅವರು
ಗಿಡಗಳನ್ನು ನೆಟ್ಟು ಪರಿಸರ ಕಾಪಾಡುವುದು ನಮ್ಮ ಜವಾಬ್ದಾರಿ. ಅದರ ಭಾಗವಾಗಿ ಮುಖ್ಯಾಧಿಕಾರಿ ಶ್ರೀಧರ್ ಅವರು ನಮ್ಮ ಬಡಾವಣೆಯನ್ನು ಗಿಡ ಮರಗಳಿಂದ ಸಮೃದ್ದಿ ಗೊಳಿಸಲು ಈಗಾಗಲೇ 15 ಗಿಡಗಳನ್ನು ನೀಡಿದ್ದಾರೆ ಅದೆಲ್ಲವೂ ಈಗಾಗಲೇ ಬೆಳೆದಿದೆ, ಮೈಸೂರಿನ ನಮ್ಮಂತಹ ಸಣ್ಣ ಸಣ್ಣ ಬಡಾವಣೆಗಳನ್ನು ಪರಿಗಣಿಸಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಕರಿಸುವುದು ಮುಖ್ಯಾಧಿಕಾರಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನೀತ್ ಜಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ಖಜಾಂಚಿಗಳಾದ ನಾಗರಾಜ್‌, ನಿರ್ದೇಶಕರಾದ ಮಹೇಶಪ್ಪ ಪಿ ಟಿ, ಯಶ್ವಂತ್, ನೀತು, ಪೃಥು.ಪಿ.ಅದ್ವೈತ್, ಪುಟ್ಟರಾಜು, ಬಸವರಾಜು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular