Tuesday, February 24, 2026
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು : ಸಂಸದ ಎಂ.ಮಲ್ಲೇಶ್‌ ಬಾಬು

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು : ಸಂಸದ ಎಂ.ಮಲ್ಲೇಶ್‌ ಬಾಬು

ಕೋಲಾರ‌ : ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮುದಾಯ, ಶಿಕ್ಷಕರು, ಪೋಷಕರು ಹಾಗೂ ನಮ್ಮೆಲ್ಲರ ಮೇಲಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು.

ತಾಲೂಕಿನ ಕೆಂಬೋಡಿ ಗ್ರಾಮದ ಪಿಎಮ್‌ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಂಬೋಡಿ ಶಾಲೆಗೆ ದಶಕಗಳ ಇತಿಹಾಸವಿದ್ದು, ಈ ದಿನದ ಕಾರ್ಯಕ್ರಮ ನೋಡಿ ನನಗೆ ತುಂಬಾ ಸಂತೋಷವಾಗಿದೆ ಇದರಲ್ಲಿ ಎಸ್‌ಡಿಎಮ್‌ಸಿ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಪಿಎಮ್‌ಶ್ರೀ ಯೋಜನೆಯಲ್ಲಿ ಕೋಲಾರ ತಾಲೂಕಿನಿಂದ ಈ ಒಂದು ಶಾಲೆ ಮಾತ್ರ ಆಯ್ಕೆಯಾಗಿರುವುದರಲ್ಲಿ ಶಿಕ್ಷಕರ ಶ್ರಮ ಎದ್ದು ಕಾಣುತ್ತದೆ ಎಂದರು.

ನಂತರ ಎಸ್‌ಎಸ್‌ಕೆ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ರಾಜೇಶ್ವರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಪೋಷಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಹೇಳಿದರು. ಬಿಇಓ ಮಧುಮಾಲತಿ ಪಡುವಣೆ ಹಾಗೂ ಎಡಿವೈಸಿ ಗಾಯತ್ರಿ, ಮುಖ್ಯಶಿಕ್ಷಕ ಬಿ.ಎಂ. ನಾರಾಯಣಸ್ವಾಮಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವೈಜಯಂತಿ ರವರ ಉಸ್ತುವಾರಿಯಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪಿಡಿಓ ರಮೇಶ್ ಬಾಬು, ಬಿಆರ್‌ಸಿ ಸಮನ್ವಯಾಧಿಕಾರಿ ಬಿ.ಎಂ.ರಾಧಮ್ಮ, ಇಸಿಓ ಗಳಾದ ನಂಜುಂಡಗೌಡ, ಸಿ.ವಿ.ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಗಿರಿಜಮ್ಮ, ಹಳೆಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಚಲಪತಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಬಾಲಾಜಿ ಗೌಡ, ಉಪಾಧ್ಯಕ್ಷ ಲಲಿತ, ಸದಸ್ಯರಾದ ಸಂತೋಷ.ಆರ್, ಪ್ರದೀಪ್‌ಕುಮಾರ್ ಎ.ಎಂ.ಜಗದೀಶ್, ತೇಜಸ್ವಿನಿ, ಸುನಿತ, ಶ್ಯಾವಕ್ಕ ತುಡ್ಡಗಿ, ವೆಂಕಟೇಶ್, ಶಶಿಕಲಾ, ಶಾರದ, ಸುರೇಶ್, ಸುನಿತ, ರಾಜಮ್ಮ, ವಿನೋದ, ಪ್ರಸಾದ್ ಹಾಗೂ ಗ್ರಾಮಸ್ಥರಾದ ಶ್ರೀನಿವಾಸಗೌಡ, ರತ್ನಕುಮಾರ್, ಶಿಕ್ಷಕರಾದ ರತ್ನಮ್ಮ, ಶ್ವೇತ, ಪಲ್ಲವಿ, ಸೌಮ್ಯ ಹಾಗೂ ಪೋಷಕರು ಅಡುಗೆ ಸಿಬ್ಬಂದಿ ಮಂಗಳ, ಸುನಿತ, ಶಾಂತಮ್ಮ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular