Friday, April 18, 2025
Google search engine

Homeರಾಜಕೀಯಮೈತ್ರಿ ಬಗ್ಗೆ ಬಿಜೆಪಿ ಸಂಪರ್ಕಿಸಿರುವುದು ಸತ್ಯ, ಸೀಟು ಹಂಚಿಕೆ ಬಗ್ಗೆ ಹೆಚ್‌ಡಿಕೆ ತೀರ್ಮಾನ ದೇವೇಗೌಡ ಘೋಷಣೆ

ಮೈತ್ರಿ ಬಗ್ಗೆ ಬಿಜೆಪಿ ಸಂಪರ್ಕಿಸಿರುವುದು ಸತ್ಯ, ಸೀಟು ಹಂಚಿಕೆ ಬಗ್ಗೆ ಹೆಚ್‌ಡಿಕೆ ತೀರ್ಮಾನ ದೇವೇಗೌಡ ಘೋಷಣೆ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಸ್ಪರ್ಧೆ ಮಾಡುವ ಕುರಿತು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅಧಿಕೃತವಾಗಿ ಪ್ರಕಟಿಸಿದ್ದು, ೪೦ ವರ್ಷದಿಂದ ಪಕ್ಷಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಈಗ ಪ್ರಾದೇಶಿಕ ಪಕ್ಷವಾದ ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ, ಮೈತ್ರಿ ವಿಚಾರ ಕುರಿತು ಕದ್ದುಮುಚ್ಚಿ ಯಾವುದೇ ಚಟುವಟಿಕೆ ನಡೆಸಿಲ್ಲ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಎಲ್ಲಾ ಕ್ಷೇತ್ರಗಳಿಗೂ ವೀಲ್ ಚೇರ್ ಮೇಲೆ ಹೋಗುತ್ತೇನೆ, ವೀಲ್ ಚೇರ್ ಮೇಲೆ ಹೋಗುವ ಶಕ್ತಿ ಇದೆ. ನನಗೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷದ ಬಗ್ಗೆ ಲವಲೇಷವೂ ಆಸಕ್ತಿ ಇಲ್ಲ. ಈ ರಾಜ್ಯದಲ್ಲಿ ಜನ ಕೊಡುವ ತೀರ್ಪು ಪ್ರಾದೇಶಿಕ ಪಕ್ಷ ಉಳಿಸುವ ತೀರ್ಪು ಎಂದು ರಾಜ್ಯದ ಜನತೆಯ ಮುಂದೆ ಕೈಮುಗಿದು ಬೇಡುತ್ತೇನೆ ಎಂದರು.

ಪಕ್ಷ ಉಳಿಸಲು ಮೈತ್ರಿ ಅನಿವಾರ್ಯ: ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದು ಸತ್ಯ, ಒಂದು ಪ್ರಾದೇಶಿಕ ಪಕ್ಷವನ್ನು ೪೦ ವರ್ಷ ನಡೆಸಿಕೊಂಡು ಬಂದಿದ್ದೇನೆ, ಕುಮಾರಸ್ವಾಮಿ ಅಮಿತ್ ಶಾ ಜೊತೆಗೆ ಸಭೆಗೆ ಹೋದಾಗ ನಿಮ್ಮ ತಂದೆ ಹಠವಾದಿ ಜೀವನ ಪರ್ಯಂತ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಮೋದಿಯವರು ಹೇಳಿದರೂ ಕುಮಾರಸ್ವಾಮಿ ನಮ್ಮ ತಂದೆಗೆ ಆರೋಗ್ಯ ಸರಿ ಇಲ್ಲ, ಹಿಂದೆ ಮಾಡಿದ ನೋವು ಈಗ ಮಾಡಲ್ಲ ಎಂದಿದ್ದರು. ಅಧಿಕಾರ ಸಿಗದಿದ್ದರೂ ಪರವಾಗಿಲ್ಲ, ತಂದೆಯವರಿಗೆ ನೋವು ಕೊಡಲ್ಲವೆಂದಿದ್ದರು. ಆದರೆ ಈಗ ಪಕ್ಷ ಉಳಿಸಲು ಮೈತ್ರಿ ಅನಿವಾರ್ಯವಾಗಿದೆ ಎಂದು ದೇವೇಗೌಡ ಹೇಳಿದರು.

ಬಿಜೆಪಿಯವರು ಸಂಪರ್ಕ ಮಾಡಿದ್ದು ಸತ್ಯವಾದರೂ ಇನ್ನೂ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆದಿಲ್ಲ. ನಾವು ಯಾವ ಸೀಟು ಕೂಡ ನಾವು ಕೇಳಿಲ್ಲ, ಹಾಸನ, ಮಂಡ್ಯ, ರಾಮನಗರ, ಕೋಲಾರ, ತುಮಕೂರಿನಲ್ಲಿ ಬಿಜೆಪಿ ವೋಟ್ ಇಲ್ಲವೇ ಹಾಗೆಂದ ಮಾತ್ರಕ್ಕೆ ಜೆಡಿಎಸ್‌ಗೆ ವೋಟ್ ಇಲ್ಲ ಎಂದು ಕೂಡ ಬಿಜೆಪಿ ಕೂಡ ಭಾವಿಸಬಾರದು. ಈ ಮಾತನ್ನು ಕೂಡ ನಾನು ಹೇಳಿದ್ದೇನೆ. ವಿಜಯಪುರ, ಬೀದರ್ ನಮ್ಮ ಪಕ್ಷ ಬೆಂಬಲ ಕೊಟ್ಟರೆ ಮಾತ್ರ ಗೆಲ್ಲುತ್ತಿರಾ ಎಂದು ಕೂಡ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೂಡ ನಮ್ಮ ಮತಗಳು ಇದೆ, ಕುಮಾರಸ್ವಾಮಿ ಅಂತಿಮವಾಗಿ ಚರ್ಚೆ ಮಾಡಿ ಎಷ್ಟು ಕ್ಷೇತ್ರ ಹಂಚಿಕೆ ಎಂದು ತೀರ್ಮಾನ ಮಾಡುತ್ತಾರೆ ಎಂದರು.

RELATED ARTICLES
- Advertisment -
Google search engine

Most Popular