ಮಂಗಳೂರು: ರಾಜ್ಯದ ಗರ್ವನರ್ ಬಿಜೆಪಿಯ ಕೈಗೊಂಬೆಯಾಗಿದ್ದು, ಗವರ್ನರ್ ಯಾವ ಕೆಳ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ ಇದು ತೋರಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು ಇದು ಒಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು, ಮೋದಿ ಸರ್ಕಾರ ಎಲ್ಲಾ ಸಂವಿಧಾನಿಕ ಹುದ್ದೆಗಳನ್ನ ಸರ್ವನಾಶ ಮಾಡ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ ಎಂದರು. ಈಗ ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ಗವರ್ನರ್ ತಪ್ಪೇ ಮಾಡದ ಸಿಎಂ ವಿರುದ್ದ ಅನುಮತಿ ಕೊಟ್ಟಿದ್ದಾರೆ. ಗವರ್ನರ್ ಯಾವ ಕೆಳ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ ಎಂದರು.
ನಾವು ಕಾನೂನಿನ ಹೋರಾಟ ಮಾಡ್ತಾ ಇದೇವೆ. ಸಿಎಂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ. ಬಿಜೆಪಿ ದುರ್ನಡತೆ ಮುಂದುವರೆದಿದೆ, ಈ ಕೇಸ್ ನಲ್ಲಿ ಕಾನೂನು ಹೋರಾಟ ಮಾಡ್ತೇವೆ ಎಂದರು. ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡ್ತಾರೆ, ಚುನಾಯಿತ ಸರ್ಕಾರ ಅಸ್ಥಿರಗೊಳಿಸೋ ಕೆಲಸ ಮಾಡ್ತಿದಾರೆ. ಯಡಿಯೂರಪ್ಪ ಅವರ ಮೇಲೆ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು, ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಇತ್ತು, ಆದರೂ ಗವರ್ನರ್ ಆಗ ಬಹಳಷ್ಟು ನೋಡಿ ಪ್ಯಾಷಿಕ್ಯೂಷನ್ ಅನುಮತಿ ಕೊಟ್ಟಿದ್ದರು. ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದ ಅವರು ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಬಿಜೆಪಿ ರಾಮ ರಾಜ್ಯ ಅಂತೆಲ್ಲಾ ಹೇಳಿ ಈ ರೀತಿ ಮಾಡ್ತಾ ಇದೆ. ಬಡವರ ಪರ ನಿಲ್ಲೋ ಜನನಾಯಕನ, ಜನಪ್ರಿಯ ಜನನಾಯಕನ ಮುಗಿಸೋಕೆ ಹೊರಟಿದ್ದಾರೆ ಎಂದು ಹೇಳಿದರು.