Sunday, April 20, 2025
Google search engine

Homeರಾಜ್ಯದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ ಪ್ರವೇಶಿಸಿದಂತಾಯಿತು : ಪ್ರಿಯಾಂಕಾ ಗಾಂಧಿ

ದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ ಪ್ರವೇಶಿಸಿದಂತಾಯಿತು : ಪ್ರಿಯಾಂಕಾ ಗಾಂಧಿ

ನವದೆಹಲಿ: ಲೋಕಸಭೆ ಉಪಚುನಾವಣೆಯ ಬಳಿಕ ಕೇರಳದ ವಯನಾಡ್‌ನಿಂದ ದೆಹಲಿಗೆ ಮರಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಷ್ಟ್ರ ರಾಜಧಾನಿಗೆ ಹಿಂತಿರುಗುವುದು ಗ್ಯಾಸ್ ಚೇಂಬರ್‌ನ್ನು ಪ್ರವೇಶಿಸಿದಂತೆ ಆಗುತ್ತಿದೆ ಎಂದು ಹೇಳಿದ್ದಾರೆ. ಅವರು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ದೆಹಲಿಯಲ್ಲಿ ಕಲುಷಿತ ಗಾಳಿ ಚಾದರದಂತೆ ನಗರವನ್ನು ಹೊದ್ದುಕೊಂಡಿದೆ. ಮೇಲಿನಿಂದ ನೋಡಿದರೆ ಭಯಾನಕ ಎನಿಸುತ್ತದೆ. ದೆಹಲಿಯ ವಾಯುಗುಣಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಿದೆ. ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಬುಧವಾರ ನಡೆದ ವಯನಾಡ್ ಮತದಾನದಿಂದ ಚುನಾವಣಾ ಕಣಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ೧೨ ದಿನ ವಯನಾಡಿನಲ್ಲಿ ಮತಪ್ರಚಾರ ನಡೆಸಿದ್ದರು. ಮತದಾನ ಮುಗಿದ ಬಳಿಕ ಈಗ ದೆಹಲಿಗೆ ವಾಪಸ್ ಆಗಿದ್ದಾರೆ.

RELATED ARTICLES
- Advertisment -
Google search engine

Most Popular