Friday, April 4, 2025
Google search engine

Homeರಾಜ್ಯ2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಭಾಗದಲ್ಲಿ‌ ಮಾಡಿದರೆ ಅನುಕೂಲ: ಸಚಿವ ಪರಮೇಶ್ವರ್

2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಭಾಗದಲ್ಲಿ‌ ಮಾಡಿದರೆ ಅನುಕೂಲ: ಸಚಿವ ಪರಮೇಶ್ವರ್

ಬೆಂಗಳೂರು :- ಮೈಕ್ರೋಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ, ತೊಂದರೆ ನೀಡುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸುಮೋಟೊ ದಾಖಲಿಸುವಂತೆಯೂ ತಿಳಿಸಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ತಡೆಯಲು ಕಾನೂನು ರೂಪಿಸಲಾಗುತ್ತಿದೆ. ಕಾನೂನು ಸಚಿವರು ಹಾಗೂ ಕಂದಾಯ ಸಚಿವರೊಂದಿಗೆ ಸಭೆ ಕರೆಯಲಾಗಿದೆ‌. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುತ್ತಿದೆ. ಸಹಾಯವಾಣಿಯನ್ನು ಆರಂಭಿಸಲಾಗುವುದು. ಸಭೆಯಲ್ಲಿ ಅಂತಿಮವಾದರೆ ನಾಳೆ ಕ್ಯಾಬಿನೆಟ್ ಮುಂದೆ ತರುತ್ತೇವೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿಗೆ ನೀಡುವಂತೆ ಕೇಳುತ್ತಿದ್ದೇವೆ. ತುಮಕೂರಿನ ಭಾಗದಲ್ಲಿ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ 21 ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಈಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕು ಸಂಪರ್ಕವಾಗುತ್ತದೆ ಎಂದರು.

ತುಮಕೂರುವರೆಗೆ ಮೆಟ್ರೋ ಯೋಜನೆ ಡಿಪಿಆರ್ ಇನ್ನು ಅಂತಿಮವಾಗಿಲ್ಲ. ಹೈದ್ರಾಬಾದ್ ಕಂಪನಿಗೆ ನೀಡಲಾಗಿದ್ದು ಡಿಪಿಆರ್ ವರದಿ ನೀಡಿಲ್ಲ. ವರದಿ ನೀಡಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ತದನಂತರ ಕೇಂದ್ರ ಸರ್ಕಾರದ ಅನುಮತಿ ಕೇಳುತ್ತೇವೆ ಎಂದು ಹೇಳಿದರು.

ಸಿಎಂ ನೇಮಕ ಮಾಡುವುದು ಹೈಕಮಾಂಡ್. ಶಾಸಕರ ಅಭಿಪ್ರಾಯ ಕೇಳಬೇಕಿಲ್ಲ ಎಂದು ರಾಮನಗರ ಶಾಸಕರ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಶಾಸಕರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಸೂಚನೆ ಶಾಸಕರಿಗು ಮತ್ತು ಮಂತ್ರಿಗಳಿಗು ಎಲ್ಲರಿಗೂ ಅನ್ವಯಯಾವಗುತ್ತದೆ. ಪಕ್ಷದಲ್ಲಿ ಯಾರು ಆ ರೀತಿ ಹೇಳಿಕೆ ಕೊಡಬಾರದು ಎಂದು ಹೈಕಮಾಂಡ್ ಸೂಚಿಸಿದ‌ ಮೇಲೆ ಎಲ್ಲರಿಗು ಅನ್ವಯವಾಗುತ್ತದೆ. ಅವರಿಗು ಹೈಕಮಾಂಡ್ ಮತ್ತೆ ಹೇಳುತ್ತಾರೆ ಎಂದರು.

ಹೈಕಮಾಂಡ್ ಮತ್ತು ಶಾಸಕರು ಆಯ್ಕೆ ಮಾಡುತ್ತಾರೆ. ಮೊದಲು ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ಆನಂತರ ಅವರು ತೀರ್ಮಾನ ಮಾಡುತ್ತಾರೆ. ಬೆಂಬಲ ಸೇರಿದಂತೆ ಬೇರೆಬೇರೆ ವಿಚಾರಗಳನ್ನು ಆಧರಿಸಿ ಪ್ರಕಟಿಸುತ್ತಾರೆ ಎಂದು ಹೇಳಿದರು‌.

RELATED ARTICLES
- Advertisment -
Google search engine

Most Popular