ಬೆಳಗಾವಿ : ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂಬ ವಿಚಾರವಾಗಿ ಮುಖ್ಯಮಂತ್ರಿ ಇದ್ದಾಗ ಇವೆಲ್ಲ ಚರ್ಚೆ ಯಾಕೆ ಬೇಕು? ಸಿಎಂ ತೆಗೆಯಬೇಕು ಎಂದು ಯಾರು ಹೇಳುತ್ತಿದ್ದಾರೆ? ಯಾರು ಕೂಡ ಹೇಳುತ್ತಿಲ್ಲ. ಎಲ್ಲರಿಗೂ ಆಸೆ, ಆಕಾಂಕ್ಷಿಗಳು ಇರುತ್ತವೆ, ಅದು ರಾಜಕೀಯ. ಇದೆಲ್ಲವೂ ಇತಿಮಿತಿಯಲ್ಲಿ ಇರಬೇಕು ನನಗೆ ಸಿಎಂ ಆಸೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಆದರೆ ಪ್ರತಿಷ್ಠೆಗಳಿವೆ. ಬಿಜೆಪಿಯಲ್ಲಿ ಇರುವುದೇ ಬೇರೆ ಅಲ್ಲಿ ಸಂಪೂರ್ಣ ಬಿರುಕು ಇದೆ ಬಿಜೆಪಿಯಲ್ಲಿ ಪ್ರತಿಷ್ಠೆ ಭಿನ್ನಾಭಿಪ್ರಾಯಗಳಲ್ಲ ಸಂಪೂರ್ಣ ಬಿರುಕು ಇದೆ. ಬಿಜೆಪಿಯಲ್ಲಿರುವ ರಾಜಕಾರಣವೇ ಬೇರೆ ಎಂದು ಅವರು ತಿಳಿಸಿದರು.
ನಮ್ಮಲ್ಲಿ ಎಲ್ಲರೂ ಚೆನ್ನಾಗಿದ್ದೇವೆ ಶಾಸಕರಿಗೆ ವೈ ಮನಸು ಏನಿಲ್ಲ ಕೆಲ ವಿಷಯದಲ್ಲಿ ಪ್ರತಿಷ್ಠೆ ಇಟ್ಟುಕೊಂಡು ಏನೇನೋ ಮಾತನಾಡುತ್ತಿದ್ದಾರೆ ನಮ್ಮ ಪಕ್ಷ ಆರೋಗ್ಯಕರವಾಗಿದೆ ರಾಜಕೀಯದಲ್ಲಿ ಇದೆಲ್ಲ ಇದ್ದಿದ್ದೇ ಆದರೆ ಅದು ಸೀಮಿತವಾಗಿರಬೇಕು ಖಂಡಿತ ನಮ್ಮ ವರಿಷ್ಠರು ಒಳ್ಳೆಯ ರೀತಿಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.