ಮಂಡ್ಯ: ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿಯಲ್ಲಿ ನಗರದ ವೆಲ್‌ಕಮ್ ಬೋರ್ಡ್ ಸಮೀಪ ಅಳವಡಿಸಿರುವ ೬೧೦ ಮಿ.ಮೀ. ವ್ಯಾಸದ ಫೀಡರ್ ಕೊಳವೆ ಮಾರ್ಗವನ್ನು ಮುಕ್ಯ ಕೊಳವೆ ಮಾರ್ಗಕ್ಕೆ ಜೋಡಣೆ ಮಾಡುವ ಕಾಮಗಾರಿಯನ್ನು ಜನವರಿ ೨೬ ರಂದು ಕೈಗೊಳ್ಳಬೇಕಾಗಿದೆ.
ಜನವರಿ ೨೬ ಮತ್ತು ೨೭ ರಂದು ನೀರನ್ನು ಪಂಪು ಮಾಡಲು ಸಾಧ್ಯವಿಲ್ಲದ ಕಾರಣ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಮಂಡ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.