Thursday, April 3, 2025
Google search engine

Homeದೇಶಜ20 ಶೃಂಗಸಭೆ: ಮೊರೊಕ್ಕೋನಲ್ಲಿ ಭೂಕಂಪದಿಂದ ಮಡಿದ ಜನರಿಗೆ ಸಂತಾಪ

ಜ20 ಶೃಂಗಸಭೆ: ಮೊರೊಕ್ಕೋನಲ್ಲಿ ಭೂಕಂಪದಿಂದ ಮಡಿದ ಜನರಿಗೆ ಸಂತಾಪ

ದೆಹಲಿ: ರಾಷ್ಟ್ರದ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಸಿದ್ಧಪಡಿಸಿರುವ ಮನಮೋಹಕ ಹಾಗೂ ಭವ್ಯ ಭಾರತ್ ಮಂಟಪಂ ನಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಭಾರತದ ನೇತೃತ್ಬದಲ್ಲಿ ಅರಂಭಗೊಂಡಿದೆ. ಪ್ರಾಸ್ತಾವಿಕ ಭಾಷಣ ಮಾಡುತ್ತ್ತಾ ವಿದೇಶಗಳಿಂದ ಆಗಮಿಸಿದ ಗಣ್ಯರನ್ನು, ಅತಿಥಿಗಳನ್ನು ಐತಿಹಾಸಿಕ ಸಭೆ ಸ್ವಾಗತಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋ ಇತ್ತೀಚಿಗೆ ಮೊರೊಕ್ಕೋದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮಡಿದ ಜನರಿಗೆ ಸಂತಾಪ ಸೂಚಿಸಿ ಗಾಯಗೊಂಡವರ ಬಗ್ಗೆ ಕಳವಳ ಹಾಗೂ ಸಹಾನುಭೂತಿ ವ್ಯಕ್ತಪಡಿಸಿದರು.

ಮೊರೊಕ್ಕೋ ಜನರ ಈ ಸಂಕಟದ ಸಮಯದಲ್ಲಿ ಇಡೀ ವಿಶ್ವ ಸಮುದಾಯ ಅವರೊಂದಿಗಿದೆ ಮತ್ತು ನೈಸರ್ಗಿಕ ವಿಕೋಪದಲ್ಲಿ ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಮೊರೊಕ್ಕೋಗೆ ಮತ್ತು ಅಲ್ಲಿನ ಜನರಿಗೆ ಯಾವುದೇ ನೆರವಿನ ಅಗತ್ಯವಿದ್ದರೂ ಒದಗಿಸಲು ಭಾರತ ಮತ್ತು ವಿಶ್ವ ಸಮುದಾಯ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES
- Advertisment -
Google search engine

Most Popular