ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೋಕಮ್ಮ ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಕ ಹನುಮಂತರಾಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್. ವಿರುಪಾಕ್ಷಪ್ಪ ಘೋಷಣೆ ಮಾಡಿದರು.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕಮ್ಮ ಸುರೇಶ್ ಹಾಗೂ ಸುಧಾ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆಯಿತು .ಮತದಾನದಲ್ಲಿ ಲೋಕಮ್ಮ ಸುರೇಶ್ ಒಂಬತ್ತು ಮತ ಪಡೆದು ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿ ಪ್ರೇಮಕ ಹನುಮಂತ ರಾಯ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಏಣಿಕೆ ಕಾರ್ಯ ಪ್ರಾರಂಭವಾದಾಗ ಇಬ್ಬರಿಗೂ ಸಮಬಲ ಬಂದಿದ್ದು ಪರಿಶೀಲನೆ ನಡೆಸಿದ ವೇಳೆ ಒಂದು ಮತ ಅಸಿಂಧು ವಾಗಿರುವುದನ್ನ ಚುನಾವಣಾಧಿಕಾರಿ ಘೋಷಣೆ ಮಾಡಿದ ಈ ವೇಳೆಯಲ್ಲಿ ಗ್ರಾಮದಲ್ಲಿ ಸ್ವಲ್ಪ ಬಿಗಿವಿನ ವಾತಾವರಣ ನಿರ್ಮಾಣವಾಯಿತು.
ಒಬ್ಬರಿಗೊಬ್ಬರಿಗೆ ಕೈ ಕೈ ಮಿಗಿಲಾಯಿಸುವ ಹಂತಕ್ಕೂ ತಲುಪಿತ್ತು ಇದನ್ನು ಮನಗಂಡ ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ ಸಿಪಿಐ ಕೆ ಶಮಿವುಲ್ಲಾ ಪಿಎಸ್ಐ ಬಸವರಾಜು ಸೇರಿದಂತೆ ಸಿಬ್ಬಂದಿ ಆಗಮಿಸಿ ಗ್ರಾಮ ಪಂಚಾಯಿತಿ ಹತ್ತಿರ ಬರದಂತೆ ಗ್ರಾಮಸ್ಥರನ್ನು ಲಾಠಿ ಚಾರ್ಜ್ ಸಹ ಮಾಡಿ ಚದುರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವಾತಾವರಣವಿದೆ.