ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು.
ಈ ರಿಹರ್ಸಲ್‌ನಲ್ಲಿ ಎಲ್ಲಾ ಆನೆಗಳು ಭಾಗವಹಿಸಿದ್ದವು. ಗಜಪಡೆ ಜೊತೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಭಾಗವಹಿಸಿದ್ದು, ಈ ರಿಹರ್ಸಲ್‌ನಲ್ಲಿ ಅಭಿಮನ್ಯು ಆನೆಗೆ ಡಿಸಿಎಫ್ ಸೌರವ್ ಕುಮಾರ್ ಪುಷ್ಪಾರ್ಚನೆ ಮಾಡಿದರು. ಪುಷ್ಪಾರ್ಚನೆ ನಂತರ ಗಜಪಡೆ ಬನ್ನಿ ಮಂಟಪದವರೆಗೆ ತಾಲೀಮು ನಡೆಸಿ ಬಳಿಕ ವಾಪಸ್ ಆನೆ ಶಿಬಿರಕ್ಕೆ ಮರಳಿತು. ಈ ಬಾರಿಯೂ ಜಂಬೂ ಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ.