ಗುಂಡ್ಲುಪೇಟೆ: ಜಾಮೀಯಾ ಮಸೀದಿಯ ನೂತನ ಅಧ್ಯಕ್ಷರಾಗಿ ಎಚ್.ಎಮ್.ಸರ್ಧಾರ್, ಉಪಾಧ್ಯಕ್ಷರಾಗಿ ಸೈಯದ್ ಅಕ್ರಮ್ ಪಾಷಾ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಂಗಾಮಿ ಅಧ್ಯಕ್ಷ ಸೈಯದ್ ಜಮೀರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಮ್.ಸರ್ಧಾರ್ ಮತ್ತು ಸೈಯದ್ ದಸ್ತಗಿರ್ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಂತರ ಸೈಯದ್ ದಸ್ತಗಿರ್ ನಾಮಪತ್ರ ವಾಪಸ್ ಪಡೆದ ಹಿನ್ನೆಲೆ ಎಚ್.ಎಮ್.ಸರ್ಧಾರ್ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಸೈಯದ್ ಅಕ್ರಮ್ ಪಾಷಾ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರ ಅವಿರೋಧ ಆಯ್ಕೆಯನ್ನು ಚುನಾವಣೆ ಅಧಿಕಾರಿಗಳಾದ ಅಕ್ಬರ್, ಆಸಿಫ್, ಯುನುಸ್, ರೆಮಾನ್ ಘೋಷಣೆ ಮಾಡಿದರು.
ಕಾರ್ಯದರ್ಶಿಯಾದ ಎ.ಆರ್.ಅಬ್ದುಲ್ ಮಾಲಿಕ್, ಖಜಾಂಚಿಯಾಗಿ ಅಬ್ದುಲ್ ಮಾಲಿಕ್(ಬಾಬು), ಪದಾಧಿಕಾರಿಗಳಾಗಿ ಇಮ್ರಾನ್ ಖಾನ್, ಹನೀಫ್, ಸುಲೇಮಾನ್, ರೆಹಮತುಲ್ಲಾ, ಸೈಯದ್ ಜಮೀರ್, ಖಯಮುದ್ದೀನ್, ಸೈಯದ್ ದಸ್ತಗೀರ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಮುಖಂಡರು ಹಾಜರಿದ್ದರು.