Friday, April 11, 2025
Google search engine

Homeರಾಜ್ಯಜಮ್ಮು ಕಾಶ್ಮೀರ ಚುನಾವಣೆ: ಅಧಿಕಾರದತ್ತ ಎನ್‌ಸಿ- ಕಾಂಗ್ರೆಸ್ ಮೈತ್ರಿ: ಬಿಜೆಪಿಗೆ ಮುಖಭಂಗ

ಜಮ್ಮು ಕಾಶ್ಮೀರ ಚುನಾವಣೆ: ಅಧಿಕಾರದತ್ತ ಎನ್‌ಸಿ- ಕಾಂಗ್ರೆಸ್ ಮೈತ್ರಿ: ಬಿಜೆಪಿಗೆ ಮುಖಭಂಗ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ೧೦ ವರ್ಷದ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ೫೦ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರಳ ಬಹುಮತದತ್ತ ದಾಪುಗಾಲಿಟ್ಟಿದೆ.

ಆರಂಭದಿಂದಲೂ ಎನ್ ಸಿ ಮತ್ತು ಕಾಂಗ್ರೆಸ್ ಮುನ್ನಡೆ ಸಿಕ್ಕಿತ್ತು. ಮಧ್ಯಾಹ್ನ ೧೨ ಗಂಟೆಯ ಟ್ರೆಂಡ್ ಪ್ರಕಾರ ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ೫೦ ಕ್ಷೇತ್ರ, ಬಿಜೆಪಿ ೨೬, ಪಿಡಿಪಿ ೦೫, ಇತರರು ೦೯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಚುನಾವಣೆ ಇದಾಗಿರುವ ಕಾರಣ ಈ ಚುನಾವಣೆ ಮಹತ್ವ ಪಡೆದಿತ್ತು.

RELATED ARTICLES
- Advertisment -
Google search engine

Most Popular